ಬೆಳಗಾವಿಸುವರ್ಣ ಗಿರಿ ಟೈಮ್ಸ್

ಗ್ರಾಪಂ ನಲ್ಲಿ ಲಂಚ ಪ್ರಕರಣ: ಬೆಳಗಾವಿ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ.

ಬೆಳಗಾವಿ: ಬೆಳಗಾವಿಯ ನಾಲ್ಕನೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಶಿಕ್ಷೆಯ ಆದೇಶವನ್ನು ಎತ್ತಿಹಿಡಿದಿದ್ದು ಇಂದು ಬೆಳಗಾವಿ ನ್ಯಾಯಾಲಯ ಶಿಕ್ಷೆಗೆ ಒಳಗಾದ ರಾಯಾಬಾಗದ ಕಟಕಬಾವಿ ಪಂಚಾಯತಿಯ ಕಾರ್ಯದರ್ಶಿ ಹಾಗು ಕ್ಲಾರ್ಕ ಎಂಭ ಆರೋಪಿಗಳ ವಿರೂದ್ದ ಶಿಕ್ಷೆಯ ವಾರಂಟನ್ನು ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನಲೆ:

ರಾಯಬಾಗ ತಾಲೂಕಿನ ಕಟಕಭಾವಿ ಪಂಚಾಯಿತಿಯಲ್ಲಿ ಅಮೀನಾ ಮಲಿಕಸಾಬ ಅರಭಾವಿ ಇವರು ಎಂಟು ವರ್ಷಗಳ ಹಿಂದೆ ತೀರಿಕೊಂಡಿದ್ದು, ಅವರ ಹೆಸರಿನಲ್ಲಿದ್ದ ಮನೆಯ ಹೆಸರು ಕಡಿಮೆ ಮಾಡಿ ಪಿರ್ಯಾದಿದಾರರಿಗೆ ವಾರ್ಸಾ ಮಾಡಿ ಆಸ್ತಿ ರಜಿಸ್ಟರನಲ್ಲಿ ದಾಖಲು ಮಾಡಿ ಉತಾರ ಕೊಡಲು ದಿನಾಂಕ: 22/06/2006 ರಂದು ಸಂಬಂಧಪಟ್ಟ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ್ದರು. ಗ್ರಾಮ ಪಂಚಾಯತಿಯ ಕಾರ್ಯದರ್ಶಿಯಾದ ಅಶೋಕ ಶ್ರೀಮಂದರ ಚೌಗುಲೆ ಮತ್ತು ಕ್ಲರ್ಕ್ ಸಂಗಪ್ಪ ಪರಪ್ಪ ದಾವಣಿ ಇವರಿಬ್ಬರೂ ಫಿರ್ಯಾದಿದಾರರ ಕೆಲಸ ಮಾಡಿಕೊಡಲು ಒಟ್ಟು ರೂ 700/- ಲಂಚವನ್ನು ಕೇಳಿದ್ದರು. ದಿ: 24/07/2006 ರಂದು ಫಿರ್ಯಾದಿದಾರರಿಂದ ರೂ 700/- ಲಂಚ ಕೇಳಿ ಪಡೆದುಕೊಂಡಾಗ ಟ್ರ್ಯಾಪ್ ಮಾಡಲಾಗಿತ್ತು.

ಅಂದು ಪ್ರಕರಣದ ವಿಚಾರಣೆಯನ್ನು ನಡೆಸಿದ 4 ನೇ ಅಧಿಕ ಸತ್ರ ಮತ್ತು ಲಂಚ ನಿರ್ಮೂಲನಾ ಕಾಯ್ದೆಯಡಿಯ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಧೀಶರಾದ ಶ್ರೀ ರಾಜೇಂದ್ರ ಎಮ್. ಬದಾಮಿಕರ ಕಟಕಭಾವಿ ಕಾರ್ಯದರ್ಶಿ ಶ್ರೀಮಂದರ ಚೌಗುಲೆ ಮತ್ತು ಕ್ಲರ್ಕ ಸಂಗಪ್ಪ ಪರಪ್ಪ ದಾವಣಿ ಇವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಕ.ಲಂ 7 ಮತ್ತು 13(1)(ಡಿ) ಸಹ ಕಲಂ 13(2) ಆಪಾದನೆಗಳಿಗೆ ತಲಾ ಎರಡು ವರ್ಷ ಕಠಿಣ ಸಜೆ ಮತ್ತು ರೂ 5000/- ದಂಡ ವಿಧಿಸಿ ಸತ್ರ ನ್ಯಾಯಾಲಯ ಬೆಳಗಾವಿ ಆದೇಶ ಹೊರಡಿಸಿತ್ತು.

ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಠಾಣೆ ಪೊಲೀಸ ಇನ್ಸಪೆಕ್ಟರರಾದ ಶ್ರೀ ಜಿ. ಸಿ ರವಿಕುಮಾರವರು ಮಾಡಿರುತ್ತಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀ ವಿಜಯಕುಮಾರ್ ಗುಂಜಾಳರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ನಂತರ ಆರೋಪಿ ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಪೀಠ ಕ್ರಿ. ಅಪೀಲ್ ನಂ: 2569/2011 ನೇದ್ದರಲ್ಲಿ ಮೇಲ್ಮನವಿ ಹಾಕಿಕೊಂಡಿದ್ದನು ನಂತರ ಕೇಳ ನ್ಯಾಯಾಲಯದ ತೀರ್ಪನ್ನು ಮಾನ್ಯ ಉಚ್ಚ ನ್ಯಾಯಾಲಯ ಎತ್ತಿಹಿಡಿದು ಆದೇಶ ಮಾಡಿರುತ್ತದೆ. ನಂತರ ಆರೋಪಿತ ಅಧಿಕಾರಿಯು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಂದೆ ಎಸ್.ಎಲ್.ಪಿ 6801/2022 ನೇದ್ದರಲ್ಲಿ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದನು‌. ಆದರೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಹ ಅರ್ಜಿಯನ್ನು ವಜಾ ಮಾಡಿದ್ದರ ಪರಿಣಾಮ ಇಂದು 4ನೇ ಜಿಲ್ಲಾ ಹೆಚ್ಚುವರಿ & ಸತ್ರ ನ್ಯಾಯಾಲಯ ಬೆಳಗಾವಿ ರವರು ದಿ: 07/11/2024 ರಂದು ಆರೋಪಿತ ಅಧಿಕಾರಿಯ ವಿರುದ್ಧ ಕನ್ವಿಕ್ಷನ್ ವಾರೆಂಟ್ ಹೊರಡಿಸಿದೆ.

Related Articles

Leave a Reply

Your email address will not be published. Required fields are marked *

Back to top button