ಗ್ರಾಮ ಪಂಚಾಯತಿ ಪಿಡಿಒ ಯಲ್ಲವ್ವ ಶೇರಿ ಅಮಾನತ್ತು.!!
ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಯಲ್ಲವ್ವ ಶೇರಿ ಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತು ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಗ್ರಾಮ ಪಂಚಾಯತ ಮಾಡಮಗೇರಿ ದಿ:29-06-2011 ರಂದು ಆಸ್ತಿ ನಂ:221 ಪ್ಲಾಟ್ ನಂ 2ಎ ಅಮರೇಶ ಶ್ರೀಶೈಲ ಹೊಸಮನಿ ಮತ್ತು ಶೈಲಾ ಹೊಸಮನಿ ಇವರ ಹೆಸರಿನಲ್ಲಿ ಜಂಟಿಯಾಗಿ ಖರೀದಿಯಾಗಿರುತ್ತದೆ. ಆಸ್ತಿಯನ್ನು ದಿ:01-08-2011 ರಂದು ಠರಾವು ಮಾಡಿ ಆಸ್ತಿ ರಜಿಸ್ಟರ್‌ದಲ್ಲಿ ದಾಖಲಿಸಲಾಗಿರುತ್ತದೆ. ಆಸ್ತಿಯ ವಿಭಜನೆಗೆ ನೋಟರಿ ಬಾಂಡ್ ಮಾಡಿಕೊಂಡಿದ್ದಾರೆ. ಬಾಂಡಿಗೆ ನೋಂದಣಾಧಿಕಾರಿ ಸಹಿ ಮತ್ತು ಮೊಹರು ಇರುವುದಿಲ್ಲ. ನೋಟರಿ ಹಾಗೂ ನೋಂದಣಿ ಮತ್ತು ಮುದ್ರಾಂಕ ನಕಲು ಛಾಪಾ ಕಾಗದದ ಮೇಲೆ ದಿ: 09-10-2023 ರಂದು ಜಂಟಿ ಖಾತೆಯಿಂದ ಶೈಲಾ ಯಶವಂತ ಹೊಸಮನಿ ಹಾಗೂ ಅಮರೇಶ ಹೊಸಮನಿ ಇವರಿಗೆ ವಿಭಜನೆ ಮಾಡಿ ಠರಾವು ದಾಖಲಿಸಿ ಆಸ್ತಿ ರಜಿಸ್ಟರ್‌ಲ್ಲಿ ನೊಂದಾಯಿಸಿರುತ್ತಾರೆ. ಜಂಟಿ ಖಾತೆದಾರರಿಗೆ ಯಾವುದೇ ರೀತಿಯ ನೋಟಿಸ್‌ನ್ನು ಜಾರಿ ಮಾಡಿರುವುದಿಲ್ಲ. ಆಸ್ತಿ ವರ್ಗಾವಣೆಯಿಂದ ಭಾದಿತರಾದ ಅಮರೇಶ ಹೊಸಮನಿ ಇವರು ಗ್ರಾಮ ಪಂಚಾಯತಿಗೆ ತಕರಾರು ಅರ್ಜಿಯನ್ನು ನೀಡಿದರೂ ಸಹ ನೌಕರರು ಅದನ್ನು ಪರಿಗಣಿಸಿರುವುದಿಲ್ಲ. ನೌಕರರು ತುರ್ತಾಗಿ ಶೈಲಾ ಯಶವಂತ ಹೊಸಮನಿ ಇವರಿಗೆ ವಿಭಜನೆ ಮಾಡಿ ಉತಾರ ನೀಡಿರುತ್ತಾರೆ.
ನೌಕರರು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವನ್ನು ಪಾಲಿಸದೇ ನಿಯಮಬಾಹಿರವಾಗಿ ಆಸ್ತಿ ವಿಭಜನೆ ಹಾಗೂ ಆಸ್ತಿ ವರ್ಗಾವಣೆ ಮಾಡಿರುವುದು ಕಂಡು ಬಂದಿರುವುದರಿಂದ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶವನ್ನು ಮಾಡಿದ್ದಾರೆ ಮುಂದಿನ ಆದೇಶದವರೆಗೆ ಕಡಬಿಯ ಅಭಿವೃದ್ಧಿ ಅಧಿಕಾರಿಗಳಿಗೆ ಮಾಡಮ್ಮಗೇರಿ ಹೆಚ್ಚುವರಿ ಚಾರ್ಜನ್ನು ನೀಡಿ ಆದೇಶ ನೀಡಿದ್ದಾರೆ.