Belgaumsuvarna giri times

ಬೆಳಗಾವಿ: ವಿವಿಧ ಬೇಡಿಕೆ ಆಗ್ರಹಿಸಿ ಅಟೋಚಾಲಕರ ಪ್ರತಿಭಟನೆ.

ಬೆಳಗಾವಿ: ಶಹರ ಸುತ್ತ ಮುತ್ತಲಿನ 15 ರಿಂದ 17 ಕಿ.ಮೀ. ವರೆಗೆ ನಮ್ಮ ಪ್ಯಾಸೆಂಜರ್ ಆಟೋ ರಿಕ್ಷಾಗಳನ್ನು ಚಾಲನೆ ಮಾಡುತ್ತಿದ್ದು, ಈಗ ಬೆಳಗಾವಿ ಶಹರದಲ್ಲಿ ಸುಮಾರು 13000 ಸಂಖ್ಯೆಗೆ ಮೇಲ್ಪಟ್ಟು ಆಟೋ ವಾಹನಗಳು ಚಾಲನೆಯಲ್ಲಿರುತ್ತವೆ. ಈಗ ನಾವುಗಳು ತೀವ್ರ ವಾಗಿ ತೊಂದರೆಗಳನ್ನು ಅನುಭವಿಸತ್ತಿದ್ದು, ಈ ತೊಂದರೆಗಳಿಗೆ ತಮ್ಮ ಕಡೆಯಿಂದ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಿ ಕೊಡಬೇಕು ಎಂದು ಪ್ರತಿಭಟನೆ ಮಾಡಿದರು.

ಈಗಾಗಲೇ ಬೆಳಗಾವಿ ಶಹರದಲ್ಲಿ 13000 ಪ್ಯಾಸೆಂಜರ್ ಆಟೋ ರಿಕ್ಷಾಗಳು ರಸ್ತೆ ಮೇಲೆ ಚಾಲನೆ ಮಾಡುತ್ತಾರೆ, ಇದರಿಂದ ಬೆಳಗಾವಿ ಶಹರದಲ್ಲಿ ಪಾರ್ಕಿಂಗ್ ಸಮಸ್ಯೆ ತೀವ್ರ ವಾಗಿದ್ದು ಕಾರಣ ಹೊಸದಾಗಿ ಪರಮಿಟಗಳನ್ನು ನೀಡಬಾರದು, ಹೊಸದಾಗಿ ಪರಮಿಟಗನ್ನು ನೀಡುವುದಕ್ಕೆ ನಿರ್ಬಂಧ ವಿಧಿಸಬೇಕು, ಎಂದು ಸೂಕ್ತ ಆದೇಶ ನೀಡಲು ವಿನಂತಿಸುತ್ತೇವೆ.

ಪ್ರತಿಯೊಂದು ಆಟೋ ರಿಕ್ಷಾ ವಾಹನಕ್ಕೆ ಪ್ರತಿ ವರ್ಷ ಇನ್ಸೂರೆಸ್ನ್ 9234 ರೂಪಾಯಿ ತುಂಬುತ್ತಿದ್ದು, ಕಾರಣ ಇನ್ಸೂರೆಸ್ನ್ ಮೊತ್ತವನ್ನು ಕಡಿಮೆ ಮಾಡಿ ಕೊಡಲು ವಿನಂತಿ. ಹಾಗೂ ಈ ಮೊತ್ತವನ್ನು ಕಡಿಮೆ ಮಾಡಿದರೆ ಎಲ್ಲಾ ವಾಹನ ಚಾಲಕರಿಗೆ ತುಂಬಾ ಸಹಾಯ ಆಗುತ್ತದೆ.

ಶಹರದಲ್ಲಿ ಹಳದಿ ಟಾಪ್‌ ಇರುವ ಪ್ಯಾಸೆಂಜರ್ ಆಟೋ ರಿಕ್ಷಾಗಳನ್ನು ರದ್ದು ಪಡಿಸಬೇಕು, ಕಾರಣ ಈ ಆಟೋಗಳ ನಿರ್ವಹಣೆ ತುಂಬಾ ಕಕ್ಷ್ಟಕರವಾಗಿದ್ದು ಕಾರಣ ಒಂದು ವರ್ಷಕ್ಕೆ ಸುಮಾರು 10,000 ವರಗೆ ವೆಚ್ಚ ಬರುತ್ತಿದ್ದು, ಇದರಿಂದ ವಾಹನ ಚಾಲಕರಿಗೆ ಹಾಗೂ ಮಾಲಿಕರಿಗೆ ಆರ್ಥಿಕವಾಗಿ ತುಂಬಾ ತೊಂದರೆಯಾಗುತ್ತದೆ. ಎಂದು ಹಳದಿ ಟಾಪ್ ಇರುವ ಎಲ್ಲಾ ವಾಹನಗಳನ್ನು ಕರಿ ಟಾಪ್ ಗಳಿಗೆ ಪರಿವರ್ತನೆ ಮಾಡಿಕೊಡಬೇಕು ಮತ್ತು ಇದಕ್ಕಾಗಿ ಸೂಕ್ತ ಆದೇಶವನ್ನು ಮಾಡಬೇಕು ಎಂದರು.

ಶಹರದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸುಮಾರು 17 ಕಿ.ಮೀ ಅಂತರವರೆಗೆ ಚಾಲನೆ ಮಾಡುತ್ತಿದ್ದು, ಈಗ ಸಿಟಿ ಬಸ್ಸಗಳಲ್ಲಿ ಮಹಿಳೆಯರಿಗೆ ಫ್ರೀ ಟಿಕೆಟ್ ಯೋಜನೆ ಜಾರಿ ಮಾಡಿದ್ದರಿಂದ, ನಮ್ಮ ಉದ್ಯೋಗಕ್ಕೆ ತುಂಬಾ ಆರ್ಥಿಕವಾಗಿ ಹಾನಿಯಾಗಿದ್ದು, ಸರ್ಕಾರ ಫ್ರೀ ಟಿಕೆಟ್ ಯೋಜನೆಗೆ ಯಾವುದೇ ರೀತಿಯ ತೊಂದರೆ ಇಲ್ಲ, ಆದರೆ ನಮ್ಮಗೆ ಬೆಳಗಾವಿ ಶಹರದಿಂದ 25 ಕಿ.ಮೀ ಅಂತರವರೆಗೆ ನಿರ್ಬಂಧಿಸಬೇಕು, ಮತ್ತು ಈ ಯೋಜನೆ ಬೆಳಗಾವಿ ಶಹರದ 25 ಕಿ.ಮೀ ಒಳಗೆ ಜಾರಿ ಮಾಡಬಾರದು, ಇದರಿಂದ ನಮ್ಮ ಉದ್ಯೋಗಕ್ಕೆ ಮೊದಲಿನಂತೆ ನಡೆಸಲು ನಮಗೆ ತುಂಬಾ ಸಹಕಾರಿಯಾಗುತ್ತದೆ.

ನಮ್ಮ ಬೇಡಿಕೆಗಳಿಗೆ ಹಾಗೂ ಪರಿಹಾರವನ್ನು ದೊರಕಿಸಿಕೊಡಬೇಕು ಇದಕ್ಕಾಗಿ 10 ರಿಂದ 15 ದಿನಗಳವರೆಗೆ ಕಾಲಾವಕಾಶವನ್ನು ನೀಡುತ್ತವೆ, ಹಾಗೂ ಅವಧಿ ಮುಗಿದ ನಂತರದ ಸಮಯದಲ್ಲಿ ವಾಹನ ಚಾಲನೆಯನ್ನು ಬಂದ ಮಾಡಿ ಚಳುವಳಿಯನ್ನು ಮೇಲೆ ಹೋಗುತ್ತವೆ ಎಂದು ಅಧ್ಯಕ್ಷರಾದ ಮನಸೂರ ರವರು ಪ್ರತಿಕ್ರಿಯಿಸಿದರು.

Related Articles

Leave a Reply

Your email address will not be published. Required fields are marked *

Back to top button