ಗಂಡನ ಹೆಸರಲ್ಲಿರುವ ಕೃಷಿ ಜಮೀನದಲ್ಲಿ ಕೃಷಿ ಹೊಂಡ ನಿರ್ಮಾಣ: ಪಿಡಿಒ ಮೇಲೆ ಕ್ರಮಕ್ಕಾಗಿ ಒತ್ತಾಯ.

ರಾಯಚೂರು: ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು ಸರ್ಜಾಪೂರ ಗ್ರಾಮ ಪಂಚಾಯಿತಿ ಪಿಡಿಒ ಶ್ರೀಮತಿ ಶೋಭರಾಣಿ ಗಂಡ ಮಹಾಬಲೇಶ್ವರ ಅವರು ಗಂಡನ ಕೃಷಿ ಜಮೀನಿನಲ್ಲಿ ಕಾನೂನುಬಾಹಿರವಾಗಿ ಕೃಷಿ ಹೊಂಡ ನಿರ್ಮಿಸಿಕೊಂಡ ಅಧಿಕಾರ ದುರಪಯೋಗ ಪಡಿಸಿಕೊಂಡರು ಮೇಲಾಧಿಕಾರಿಗಳು ಯಾವುದೇ ಕ್ರಮಕೊಳ್ಳದೆ ಇರುವುದರಿಂದ ಗ್ರಾಮೀಣ ಕೂಲಿ ಕಾರ್ಮಿಕ ಸಂಘ ಲಿಂಗಸೂರು ಘಟಕ ಗುಂಡಪ್ಪ ಯರಡೋಣ ಆರೋಪ ಮಾಡಿದ್ದಾರೆ.
ಲಿಂಗಸಗೂರು ತಾಲ್ಲೂಕು, ಲಿಂಗಸೂರು ಹೋಬಳಿ, ಸರ್ಜಾಪೂರ ಗ್ರಾಮದ ವ್ಯಾಪ್ತಿಯ ಸರ್ವೇ ನಂಬರ್ 97/*/3ರ ಕೃಷಿ ಜಮೀನು ಮಹಾಬಲೇಶ್ವರ ತಂದೆ ಸಿದ್ದಪ್ಪ ಸಾ ಸರ್ಜಾಪುರ ಇವರು ಹೆಸರಲ್ಲಿರುತ್ತದೆ, ಹಾಗೂ ಮಹಾಬಲೇಶ್ವರ ಅವರ ಲಿಂಗಸಗೂರು ತಾಲ್ಲೂಕಿನ ಕೋಠಾ ಗ್ರಾಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ಸು.01 ಲಕ್ಷ ಮಾಸಿಕ ವೇತನ ಪಡೆಯುತ್ತಿದ್ದು ಇವರು ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದಾರೆ.
2023-24ನೇ ಸಾಲಿನ ಅವಧಿಯಲ್ಲಿ ಮನರೇಗಾ ಯೋಜನೆಯಡಿಯಲ್ಲಿ ಶ್ರೀಮತಿ ಶೋಭರಾಣಿ ಅವರು ತಮ್ಮ ಗಂಡನ ಹೆಸರಿನ ಕೃಷಿ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಲ್ಲದೆ, ಇದಕ್ಕೆ ಸಂಬಂಧಿಸದಂತೆ ಒಟ್ಟು 43470 ರೂಗಳನ್ನು ಹಣವನ್ನು ಪಾವತಿಸಿದ್ದಾರೆ ಹಾಗೂ ಪಿಡಿಒ ಅವರು ಸ್ಥಳೀಯವಾಗಿದ್ದುಕೊಂಡು, ಸ್ಥಳೀಯ ಪಂಚಾಯಿತಿಯಲ್ಲೇ ಕೆಲಸ ಮಾಡುತ್ತಾ, ಸ್ಥಳೀಯ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ನೇಪದಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಸರ್ಕಾರದ ಯೋಜನೆಯೊಂದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಈ ಕೂಡಲೇ ಕ್ರಮ ಕೈಗೊಂಡು ಅಮಾನತ್ತು ಮಾಡಬೇಕು ಹಾಗೂ ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ಮರುಪಾವತಿಸಿಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಒತ್ತಾಯಿಸುತ್ತುವೆ ತಪ್ಪಿದಲ್ಲಿ ತಾಲ್ಲೂಕು ಪಂಚಾಯಿತಿ ಮುಂದೆ 01 ವಾರದೊಳಗೆ ಧರಣಿ ಮಾಡಲಾಗವುದು ಎಂದು ಗ್ರಾಮೀಣ ಕೂಲಿ ಕಾರ್ಮಿಕ ಸಂಘ ಲಿಂಗಸೂರು ಘಟಕ ಗುಂಡಪ್ಪ ಯರಡೋಣ ರವರು ಎಚ್ಚರಿಕೆ ನೀಡಿದ್ದಾರೆ.