ಚಿಕ್ಕ ಮಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೇಲೆ ಕ್ರಮಕ್ಕಾಗಿ ಲೋಕಾಗೆ ಸರಕಾರದ ಗ್ರೀನ್ ಸಿಗ್ನಲ್..
ಬೆಂಗಳೂರು: ಅರಣ್ಯ ಇಲಾಖೆಯ ವಿವಾದಿತ ಜಮೀನಿನಲ್ಲಿನ ಪುಂಡರಿಂದ ಮರಗಳನ್ನು ಕತ್ತರಿಸಿದ ಪ್ರಕರಣದಲ್ಲಿ ನಿರ್ಲಕ್ಷ ವಹಿಸಿದಕ್ಕಾಗಿ ಚಿಕ್ಕಮಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೇಲೆ ಕ್ರಮ ತಗೆದುಕೊಳ್ಳಲು ರಾಜ್ಯ ಸರಕಾರ ಲೊಕಾಗಿ ಗ್ರೀನ್ ಸಿಗ್ನಲ್ ನೀಡಿದೆ.
ಮೂಡಗೇರಿಯ ವ್ಯಕ್ತಿ ಯೊಬ್ಬರು ದಾಖಲಾತಿಗಳ ಸಮೇತ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತರಿಗೆ ಸಲ್ಲಿಸಿದ ಪಿರ್ಯಾದಿ ಮೇಲೆ ರಾಜ್ಯ ಸರಕಾರಕ್ಕೆ ಕ್ರಮ ತಗೆದುಕೊಳ್ಳಲು ಅನುಮತಿ ಕೋರಿದ್ದರು.
ಪ್ರಕರಣದ ಹಿನ್ನಲೆ: ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರಮೇಶ ಬಾಬು ರವರು ತಲಗೂರು ಗ್ರಾಮದ ಅರಣ್ಯ ಇಲಾಖೆಯ ವಿವಾದಿತ ಜಮೀನಿನ ಸರ್ವೆ ನಂಬರ್ ೫೯ ರಲ್ಲಿ ಸುಮಾರು ೩೫೦ ಕ್ಕು ಹೆಚ್ಚು ಮರಗಳನ್ನು ಕತ್ತರಿಸುವಲ್ಲಿ ನಿರ್ಲಕ್ಷ ವಹಿಸಿದ್ದಾರೆ ಹಾಗೂ ಮರಗಳಿಂದ ೫೬ ಲಕ್ಷ ರೂ ಮಾರಾಟ ಮಾಡಿದ್ದರಲ್ಲಿ ಅದರ ೨೫% ಸರಕಾರಕ್ಕೆ ಆದಾಯ ಇತ್ತು ಅದರಲ್ಲಿ ಬರಬೇಕಾದ ೧೩ ಲಕ್ಷ ರೂ ಆದಯ ಬದಲಿ ಕೇವಲ ಒಂದು ಲಕ್ಷ ವಸೂಲಿ ಮಾಡಿದ್ದರು. ಇದು ಕರ್ನಾಟಕ ಮರ ರಕ್ಷಣೆ ಕಾಯ್ದೆ ೧೯೭೬ ರ ಉಲ್ಲಂಘಣೆಯಾಗುತ್ತದೆ ಎಂದು ಅವರ ದೂರು ಕೇಳಿ ಬಂದಿತ್ತು.
ಕರ್ನಾಟಕ ಲೋಕಾಯುಕ್ತರು ಸ್ಥಳ ಸ್ಥಾನಿಕ ಚೌಕಾಶಿ ಮಾಡಿ ಕಾಗದ ಪತ್ರಗಳನ್ನು ಗಮನಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ದ ಕ್ರಮ ತಗೆದುಕೊಳ್ಳಲು ಸರಕಾರಕ್ಕೆ ವಿನಂತಿಸಿದ್ದರು.