ಬೆಳಗಾವಿಸುವರ್ಣ ಗಿರಿ ಟೈಮ್ಸ್

ಚಿಂಚಣಿ ಗ್ರಾಮದ ಇಚಲಕರಂಜಿಗೆ ರಸ್ತೆಯ ಹಳ್ಳದ ಸೇತುವೆ ಮತ್ತು ರಸ್ತೆಯನ್ನು ದುರುಸ್ತಿ ಮಾಡಿ ಎಂದು ಪ್ರತಿಭಟನೆ.

ಚಿಕ್ಕೋಡಿ: ಇಚಲಕರಂಜಿ ಹೋಗುವಾಗ ಚಿಂಚಣಿ ಗ್ರಾಮದ ಹತ್ತಿರವಿರುವ, ಹಳ್ಳದ ಸೇತುವೆಯ ಮೇಲೆ ಹಾಗೂ ರಸ್ತೆಯ ಮೇಲೆ, ಬ್ರಹತ್ತಾಕಾರದ ಹುಂಡಿಗಳು ಬಿದ್ದಿವೆ, ಮೇಲ್ಸೇತುವಿಗೆ ತಡೆಗೋಡಿಯೂ ಸಹ ಇರುವುದಿಲ್ಲ, ಹಳ್ಳವು ತುಂಬಿ ಹರಿಯುತ್ತಲಿದೆ, ಸಾವಿರಾರು ಶಾಲಾ ಮಕ್ಕಳು, ನಾಗರಿಕರು, ವಾಹನಧಾರಕರು ಇಂತಹ ಅಪಾಯದ ಸ್ಥಿತಿಯಲ್ಲಿಯೇ ಸಂಚರಿಸುತ್ತಿದ್ದಾರೆ, ಯಾವುದಾದರೂ ಅನಾಹುತವಾಗುವ ಮುಂಚೆ, ರಸ್ತೆ ಮತ್ತು ಮೇಲ್ಸೇತುವೆಯ ದುರುಸ್ತಿ ಕಾರ್ಯವಾಗಬೇಕೆಂದು, ಚಿಂಚಣಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶನಿವಾರ ಮುಂಜಾನೆ 10:30 ಕ್ಕೆ ಸೇತುವೆಯ ಮೇಲೆ ಪ್ರತಿಭಟನೆ ಮಾಡಿದರು.

ರಸ್ತೆ ತಡೆಗಟ್ಟಿ ಕೆಲಕಾಲ ಸಂಚಾರ ಬಂದ ಮಾಡಿ ಸರಕಾರಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧವಾಗಿ ಘೋಷನೆ ಕೂಗಿದರು, ಸ್ಥಳಕ್ಕೆ ಚಿಕ್ಕೋಡಿಯ ಪಿ ಎಸ್ ಆಯ್ ಬಸಗೌಡಾ ನೇರ್ಲಿ ಇವರು ತಮ್ಮ ತಂಡದೊಂದಿಗೆ ಆಗಮಿಸಿ ಯಾವುದೇ ತರದ ಅಹಿತಕರ ಘಟನೆಗಳಾಗದಂತೆ ಸೂಕ್ತ ಭದ್ರತೆ ಒದಗಿಸಿದರು, ಸ್ಥಳಕ್ಕೆ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದು ರಸ್ತೆ ಮಧ್ಯದಲ್ಲಿಯೇ ಕುಳಿತುಕೊಂಡರು, ಚಿಂಚಣಿ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮಣ ಡಂಗೇರ ಮಾತನಾಡಿ, ಚಿಂಚಣಿ ಬಸ್ ನಿಲ್ದಾಣದಿಂದ ಊರಿನ ಆಚೆಯವರೆಗೆ ದೊಡ್ಡ ದೊಡ್ಡ ಹೊಂಡಗಳು ರಸ್ತೆ ಮಧ್ಯದಲ್ಲಿಯೇ ಬಿದ್ದಿವೆ, ಜನರು ಮಕ್ಕಳು ಸಂಚರಿಸುವುದು ತುಂಬಾ ಅಪಾಯಕಾರಿಯಾಗಿದೆ, ಜನರಿಗೆ ಮೂಲಭೂತ ಸೌಕರ್ಯಗಳಲ್ಲಿಯ ಒಂದಾದ ಸರಿಯಾದ ರಸ್ತೆ ಇಲ್ಲವಾದರೆ ಜನರ ಗತಿ ಏನು ? ಎಂದು ಕೇಳಿದರು, ಚಿಕ್ಕೋಡಿ ಉಪವಿಭಾಗಾಧಿಕಾರಿಗಳಾದ ಸುಭಾಷ ಸಂಪಗಾವಿ ಇವರು ಕೆಲ ಸಮಯದಲ್ಲಿ ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲಿಸಿ ಪರಿಸ್ಥಿತಿಯ ಬಗ್ಗೆ ಅರ್ಥ ಮಾಡಿಕೊಂಡರು, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಈ ರಸ್ತೆ ಕಾಮಗಾರಿಯಾಗಿ ಬಹಳ ಸಮಯಗಳು ಆಗಿಲ್ಲ ತುಂಬಾ ಕಳಪೆ ಮಟ್ಟದ್ದಾಗಿದೆ, ಸರಕಾರ ರಸ್ತೆಗಳ ನಿರ್ವಹಣೆಗೆ ಹಣ ನೀಡುತ್ತದೆ ಆದರೆ ಈ ರಸ್ತೆಯ ನಿರ್ವಹಣೆ ಏಕೆ ಆಗಿಲ್ಲ ? ಎಂಬುದನ್ನು ಪರಿಶಿಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕೆಂದು ಒತ್ತಾಯಿಸಿದರು, ಮನವಿ ಸ್ವೀಕರಿಸಿ ಮಾತನಾಡಿದ ಎ.ಸಿ. ಸಾಹೇಬರು ಕೂಡಲೇ ರಸ್ತೆ ದುರುಸ್ತಿ ಕಾಮಗಾರಿಗಾಗಿ ಸಂಭಂಧಿತ ಅಧಿಕಾರಿಗಳಿಗೆ ಸೂಚಿಸಿ ನಾಲ್ಕು ದಿವಸಗಳಲ್ಲಿ ತಮ್ಮನ್ನು ತೊಂದರೆ ಮುಕ್ತಗೊಳಿಸುತ್ತೇವೆ ಕೂಡಲೇ ಪ್ರತಿಭಟನೆಯನ್ನು ಹಿಂಪಡೆಯಬೇಕೆಂದು ಸೂಚಿಸಿದರು. ನಂತರ ಪ್ರತಿಭಟನಾಕಾರರು ಒಂದು ವಾರದ ಒಳಗೆ ಕೆಲಸ-ಕಾರ್ಯಗಳು ಆಗಬೇಕು, ಇದಕ್ಕೆ ತಪ್ಪಿದಲ್ಲಿ ನಿಪ್ಪಾಣಿ-ಮುಧೋಳ ಮಾರ್ಗವನ್ನು ತಡೆದು ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿ ಪ್ರತಿಭಟನೆಯನ್ನು ಮುಕ್ತಗೊಳಿಸಿದರು.

ಈ ಸಂಧರ್ಭದಲ್ಲಿ ಸುಭಾಷ ಚೌಗಲಾ, ಭೀಮಗೌಡಾ ಚೊಂಚಣ್ಣವರ, ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ, ರುದ್ರಯ್ಯಾ ಹಿರೇಮಠ, ಸೌರಭ ಪಾಟೀಲ, ಲಕ್ಷ್ಮಣ ಡಂಗೇರ, ಸಂತೋಷ ಮಾಳಗೆ, ಸಚೀನ ಪರೀಟ, ಆಕಾಶ ಮುದ್ದಪ್ಪಗೋಳ, ಚನ್ನಯ್ಯಾ ಮಠಪತಿ, ದೀಪಕ ಮುದ್ದಪ್ಪಗೋಳ, ತಮ್ಮಣ್ಣಾ ನಿಲಜಗಿ, ಸಮೀರ ನಾಯಿಕ, ಅನೀಲಗೌಡಾ ಪಾಟೀಲ, ರಾಮಗೌಡಾ ಧರಣಗುತ್ತಿ ಹಾಗೂ ನೂರಾರು ಸಂಖ್ಯೆಯಲ್ಲಿ ಚಿಂಚಣಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button