ಬೆಳಗಾವಿಸುವರ್ಣ ಗಿರಿ ಟೈಮ್ಸ್
ರಾಯಬಾಗ ಪಟ್ಟಣ ಮುಖ್ಯಾಧಿಕಾರಿ ಸಂಜು ಮಾಂಗ ಎತ್ತಂಗಡಿ ?
ಬೆಳಗಾವಿ: ರಾಯಬಾಗದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಜು ಮಾಂಗ ಇವರನ್ನು ಬೆಳಗಾವಿ ಜಿಲ್ಲಾಧಿಕಾರಿಗಳು ಇಂದು ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದಾರೆ.
ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ರಾಯಬಾಗ ಪಟ್ಟಣ ಪಂಚಾಯತಿಯ ಅಕ್ರಮದ ಬಗ್ಗೆ ಸದ್ದು ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಜಾರಕಿಹೋಳಿಯವರು ಎತ್ತಂಗಡಿ ಮಾಡಿ ಅಕ್ರಮಗಳನ್ನು ತನಿಖೆ ಮಾಡಲು ಜಿಲ್ಲಾಧಿಕಾರಿಗಳಿಗೆ ಹಾಗೂ ಯೋಜನಾ ನಿರ್ದೇಶಕರಿಗೆ ಆದೇಶ ಮಾಡಿದ್ದರು.
ಇಂದು ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿ ಸಂಜು ಮಾಂಗ ಇವರನ್ನು ಸೇವೆಯಿಂದ ಬಿಡುಗಡೆಗೊಳಿಸಿ, ತಾತ್ಕಾಲಿಕವಾಗಿ ಹಾರೂಗೇರಿ ಪುರಸಭೆಯ ಮುಖ್ಯಾಧಿಕಾರಿ ಅಭಿಷೇಕ ಪಾಂಡೆ ಇವರಿಗೆ ಆದೇಶ ಮಾಡಿದ್ದಾರೆಂದು ತಿಳಿದು ಬಂದಿದೆ.