ಉಪ-ಕುಲಪತಿಗಳನ್ನು ತನಿಖೆಗೆ ಒಳಪಡಿಸುವ ಅಧಿಕಾರಿ ಲೋಕಾಯುಕ್ತಕ್ಕೆ ಇಲ್ಲಾ..!
ಬೆಂಗಳೂರು: ಉಪಕುಲಪತಿಗಳನ್ನು ತನಿಖೆಗೆ ಒಳಪಡಿಸುವ ಅಧಿಕಾರ ಕರ್ನಾಟಕ ಲೋಕಾಯುಕ್ತಕ್ಕೆ ಅಧಿಕಾರ ಇಲ್ಲಾ ಎಂದು ಉಪ-ಕುಲಪತಿಗಳ ಭ್ರಷ್ಟಾಚಾರದ ಕುರಿತ ಪಿರ್ಯಾದಿಯನ್ನು ವಜಾ ಮಾಡಲಾಗಿದೆ.
ಬಳ್ಳಾರಿಯ ಉಪಕುಲಪತಿಯಾಗಿದ್ದ ಸಿದ್ದು ಅಲಗೂರ ಅವರು ಬೆಳಗಾವಿಯ ರಾಣಿ ಚನ್ನಮ್ಮ ವಿವಿಯಲ್ಲಿ ಮಾಡಿದ್ದರೆನ್ನಲಾದ ಅಕ್ರಮಗಳ ಕುರಿತು ಬೆಳಗಾವಿಯ ವಕೀಲ & ಸಾಮಾಜಿಕ ಹೊರಾಟಗಾರ ಸುರೇಂದ್ರ ಉಗಾರೆ ಇವರು ಲೋಕಾ ಮುಂದೆ ದಾಖಲೆಗಳ ಸಮೇತ ಪಿರ್ಯಾದಿ ನೀಡಿದ್ದರು. ಆದ್ರೆ ಕರ್ನಾಟಕ ಲೋಕಾಯುಕ್ತರು ತಮಗೆ ವಿಚಾರಣೆಗೆ ಒಳಪಡಿಸುವ ಅಧಿಕಾರ ಇಲ್ಲಾ ಎಂದು ಪಿರ್ಯಾದಿಯ ಪಿರ್ಯಾದಿಯನ್ನು ವಜಾ ಮಾಡಿದ್ದಾರೆ.
ಈ ಕುರಿತು ಸುರೇಂದ್ರ ಉಗಾರೆ ಇವರು ಲೋಕಾಯುಕ್ತಕ್ಕೆ ಅಧಿಕಾರ ಇಲ್ಲಾ ಎಂದ್ರೆ ಇನ್ನು ಭ್ರಷ್ಟಾಚಾರಿಗಳ ಬಗ್ಗೆ ಎಲ್ಲಿ ಅರ್ಜಿ ಕೊಡಬೇಕು ? ಎಂದು ಪ್ರಶ್ನಿಸಿದ್ದಾರೆ. ಸರಕಾರ ಕೂಡಾ ಕ್ರಮ ತಗೊಳ್ಳಲ್ಲಾ ಇನ್ನು ಇವರ ವಿರೂದ್ದ ಕ್ರಮ ಹೇಗೆ ತಗೆದುಕೊಳ್ಳುವದು ಹೇಗೆ ? ಎಂದು ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ ಲೋಕಾ ಅರ್ಜಿಯು ವಜಾ ಆಗಿದ್ತಿಂತೆಯೇ ಅಕ್ರಮ ಮಾಡುವ ಉಪ-ಕುಲಪತಿಗಳು ಇನ್ನು ಹೆಚ್ಚು ಅಕ್ರಮ ಮಾಡಲು ಅವಕಾಶ ಕೊಟ್ಟಂತಿದೆ. ಇವರನ್ನು ತಡೆಯಲು ಸರಕಾರ ಏನು ಕ್ರಮ ತಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.