ಹೊರಗುತ್ತಿಗೆ ನೌಕರ ಕಂದಾಯ ಅಧಿಕಾರಿಯಾದರೆ ! ಸಿಪಾಯಿಯೇ ಮುಖ್ಯಾಧಿಕಾರಿ !!
ಬೆಳಗಾವಿ: ಹೊರಗುತ್ತಿಗೆ ನೌಕರ ಕಂದಾಯ ಅಧಿಕಾರಿಯಾದರೆ ! ಸಿಪಾಯಿಯೇ ಮುಖ್ಯಾಧಿಕಾರಿ !! ಹೌದಾ ? ಇದು ಎಲ್ಲಿ ಅಂತಿರಿ ?ಬೆಳಗಾವಿ ಜಿಲ್ಲೆಯ ರಾಯಬಾಗದ ಪಟ್ಟಣ ಪಂಚಾಯತ ಕಥೆ ಇದು.
ಇಲ್ಲಿ ಕಳೆದ ಒಂದು ವರ್ಷದಿಂದ ಇಬ್ಬರೇ ಅಧಿಕೃತ ಅಧಿಕಾರಿಗಳು ಒಬ್ಬರು ಮುಖ್ಯಾಧಿಕಾರಿ ಇನ್ನೊಬ್ಬರು ಸಿಪಾಯಿ. ಇವರಿಬ್ಬರಿಂದಲೇ ಕಳೆದ ಒಂದು ವರ್ಷದಿಂದ ಪಟ್ಟಣ ಪಂಚಾಯತಿಯ ಆಡಳಿತ ನಡೆಯುತ್ತಿದೆ. ಆದರೆ ಇಲ್ಲಿ ಯಾವ ಅಧಿಕಾರಿ ಬರಲು ಹೇದರಿತ್ತಾರೆ ಎಂಬುದು ಮಾತ್ರ ಸತ್ಯ.
ಕಳೆದ ಒಂದು ವರ್ಷದಿಂದ ಇಲ್ಲಿ ಇಬ್ಬರೇ ಅಧಿಕಾರಿಗಳಿದ್ದರಿಂದ ನೌಕರಿ ಮಾಡೋರು ಯಾರು ಅನ್ನೋದು ನಾಗರೀಕರಿಗೆ ನಿಜವಾಗಿಯೂ ಗೊತ್ತಾಗ್ತಾ ಇಲ್ಲಾ. ಹೊರಗುತ್ತಿಗೆ ನೌಕರ ಪುಲಟೈಮ್ ಕಂದಾಯ ಅಧಿಕಾರಿಯಾಗಿ ಕೆಲಸ ಮಾಡ್ತಾರೆ ಇನ್ನು ಸಿಪಾಯಿ ಪುಲ್ ಟೈಮ್ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯಾಧಿಕಾರಿಯ ಪಾತ್ರಧಾರಿ ಸಿಪಾಯಿ ರವೀ ಬಿರಣಗಿ ಯವರೇ ಎಲ್ಲಾ ದಾಖಲೆಗಳ ಮೇಲೆ ಸಹಿ ಮಾಡೋದು ಇವರೇ. ಆ ದಾಖಲೆಗಳು ಈಗ ಎಲ್ಲಾ ಕಡೆ ಸಿಗುತ್ತವೆ.
ಸಿಪಾಯಿ ರವಿ ಬೀರಣಗಿ ಮುಖ್ಯಾಧಿಕಾರಿ ಪಾತ್ರ ಮಾಡಿದರೆ, ಇನ್ನು ಇಲ್ಲಿನ ಮುಖ್ಯಾಧಿಕಾರಿ ಎನು ಮಾಡುತ್ತಾರೆ ಅನ್ನುವ ಮಾತು ಬರಿತ್ತದೆ. ಮುಖ್ಯಾಧಿಕಾರಿ ಸಂಜು ಮಾಂಗ ಸಾಹೇಬರು, ಹೊಸ ಸಾಹೇಬರ ತರಹ ಹನ್ನೊಂದಕ್ಕೆ ಬಂದು ಹನ್ನೆರಡಕ್ಕೆ ಡಿಸಿ ಆಪೀಸಲ್ಲಿ ಮೀಟಿಂಗ ಇದೆ ಎಂದು ಹೋಗುತ್ತಾರೆ. ಹೀಗಾಗಿ ದಿನಾಲು ಎಲ್ಲಾ ಕಾಗದ ಪತ್ರಗಳಿಗೆ ಸಿಪಾಯಿ ರವಿ ಬೀರಣಿಗಿಯವರೇ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಎಂಬುದು ಸತ್ಯ.
ಜಿಲ್ಲಾಡಳಿತಕ್ಕೆ ಇದು ಎಲ್ಲವೂ ಗೊತ್ತಿದ್ದರೂ, ಮಹಾಭಾರತದ ದೃತರಾಷ್ಟ್ರತರಹ ಕುಳಿತು ಬಿಟ್ಟಿದ್ದಾರೆ. ಹೋಗಲಿ, ಯಾರಾದರು ಮನವಿ ಕೊಟ್ಟರೆ, ತನಿಖೆಗೆ ಆದೇಶ ಮಾಡಿದರೆ ಆಯಿತು ತಮ್ಮ ಕೆಲಸ ಮುಗೀತು ಎಂದು ಬಿಡುತ್ತಾರೆ. ಹಾಗಾದರೆ, ಇಲ್ಲಿನ ಕಥೆ ಹಾಗು ಪುರಾಣಕ್ಕೆ ಜವಾಬ್ದಾರರು ಯಾರು ?
ಇ ಕುರಿತು ವಕೀಲ ಮತ್ತು ಹೊರಾಟಗಾರ ಸುರೇಂದ್ರ ಉಗಾರೆ ಇವರು ಬೆಳಗಾವಿ ಉಸ್ತುವಾರಿ ಸಚಿವರಿಗೆ ರಾಯಬಾಗ ಮತ್ತು ಕುಡಚಿ ಕ್ಷೇತ್ರಗಳ ಮೇಲೆ ಟಾವೆಲ್ ಹಾಕಲು ಟೈಮ್ ಇದೆ, ಅದರೆ ರಾಯಬಾಗದ ಪಟ್ಟಣ ಪಂಚಾಯತಿಯಲ್ಲಿ ಎನು ನಡೆಯುತ್ತಿದೆ ? ಅಲ್ಲಿ ಸಿಬ್ಬಂಧಿ ಎಷ್ಟು ಇದ್ದಾರೆ ? ಸಿಬ್ಬಂಧಿ ಏಕೆ ಬರುತ್ತಿಲ್ಲಾ ? ಅನ್ನೊದುರ ಬಗ್ಗೆ ತಿಳಿದುಕೊಳ್ಳಲು ಸಮಯ ವಿಲ್ಲಾ. ಉಸ್ತುವಾರಿ ಸಾಹೇಬರು ಒಂದ್ಸಲ ಈ ಕಡೆ ನೋಡಲಿ ಎನ್ನುತ್ತಾರೆ.
ಉಸ್ತುವಾರಿ ಸಚಿವರಾದ ಜಾರಕಿಹೋಳಿ ಸಾಹೇಬರು ಇನ್ನಾದರೂ ರಾಯಬಾಗ ಪಟ್ಟಣ ಪಂಚಾಯತಿಯ ಕಡೆಗೆ ಗಮನ ಕೊಟ್ಟು ಕೊಳೆತು ನಾರುತ್ತಿರುವ ಆಡಳಿತ ವ್ಯವಸ್ಥೆಯನ್ನು ಬಗೆಹರಿಸುತ್ತಾರೆಯೇ ಅನ್ನೊದನ್ನು ಕಾದು ನೋಡಬೇಕು.