ಕಲಬುರಗಿಸುವರ್ಣ ಗಿರಿ ಟೈಮ್ಸ್
ಪ್ರತಿಭಟನೆಯ ವೇಳೆ ಕುಸಿದು ಬಿದ್ದ ಸಂಸದ ಉಮೇಶ್ ಜಾಧವ್ !

ಕಲಬುರಗಿ: ಆರೋಪಿ ಸಂಗಮೇಶ್ ಮನೆ ಮೇಲೆ ದಾಳಿ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯ ಪ್ರತಿಭಟನೆ ವೇಳೆ ಸಂಸದ ಡಾ.ಉಮೇಶ್ ಜಾಧವ್ ಏಕಾಏಕಿ ತಲೆ ತಿರುಗಿ ಬಿದ್ದು ಅಸ್ವಸ್ಥಗೊಂಡಿದ್ದಾರೆ.
ಅಂಬೇಡ್ಕರ್ ಪ್ರತಿಮೆ ಅಪಮಾನ ಕೇಸ್ ಸಂಬಂಧ ಜಾಮೀನು ಪಡೆದು ಹೊರಬಂದ ಆರೋಪಿ ಸಂಗಮೇಶ್ ಮನೆಗೆ ಕಿಡಿಗೇಡಿಗಳು ರಾತ್ರೋ ರಾತ್ರಿ ನುಗ್ಗಿ ಹಲ್ಲೆ ನಡೆಸಲಾಗಿತ್ತು.
ಇದನ್ನು ಖಂಡಿಸಿ ವೀರಶೈವ ಲಿಂಗಾಯ ಸಮುದಾಯದಿಂದ ಕಲಬುರಗಿ ಬೆಂಗಳೂರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಸದ ಡಾ.ಉಮೇಶ್ ಜಾಧವ್ ಗೆ ಲೋ ಬಿಪಿಯಾಗಿ ತಲೆ ತಿರುಗಿ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಅಸ್ವಸ್ಥರಾದ ಸಂಸದರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.