ನಾಗಪುರಸುವರ್ಣ ಗಿರಿ ಟೈಮ್ಸ್
‘ರಾಮನವಮಿ’ಯಂದೇ ಮಟನ್ ಸೇವಿಸಿದ ಮಹಾರಾಷ್ಟ್ರದ ಸಿಎಂ !?

ನಾಗಪೂರ: ಪ್ರದಾನ ಮಂತ್ರಿಗಳ ನವರಾತ್ರಿಯ ನಾನ್ ವೆಜ್ ಸುದ್ದಿ ಇನ್ನೂ ಸುದ್ಧಿಯಲ್ಲಿರುವಾಗಲೇ ಮಹಾರಾಷ್ಟ್ರ ಸಿಎಂ ಏಕನಾಥ ಸಿಂಧೆ ರಾಮನವಮಿಯಂದೇ ‘ಸಾವ್ಜಿ ಮಟನ್’ ತಿಂದ ಸುದ್ದು ಈಗ ದೇಶದ ತುಂಬೆಲ್ಲ ವೈರಲ್ ಆಗಿ ಬಿಜೆಪಿಗೆ ಮತ್ತು ಅಂಗಪಕ್ಷದವರಿಗೆ ಮುಜಗುರಕ್ಕೆ ತಳ್ಳಿದೆ.
ಕಳೆದವಾರ ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ನವರಾತ್ರಿಯಂದು ಮಾಂಸಾಹಾರ ಸೇವಿಸುತ್ತಾರೆಂದು ವಿರೋದ ಪಕ್ಷದ ಕುರಿತು ತಮ್ಮ ಭಾಷಣದಲ್ಲಿ ಹೇಳಿದ್ದರು. ಆದರೆ ಆ ಮಾತು ಇನ್ನೂ ಚಲನೆಯಲ್ಲಿರುವಾಗಲೇ ಮಹಾ ಸಿಎಂ ಸಾವಜಿ ಮಟನ್ ತಿಂದಿದ್ದಾರೆ.
ಮೊನ್ನೆ ಸಿ ಎಂ ಸಿಂಧೆಯವರು ನಾಗಪೂರದಲ್ಲಿ ಚುನಾವಣಾ ಪ್ರಚಾರದಲ್ಲಿದ್ದರು. ಅಲ್ಲಿ ಸಾವಜಿ ಮಟನ್ ತಿಂದ ಬಗ್ಗೆ ಫೊಟೊ ಒಂದು ಅಂತರಜಾಲದಲ್ಲಿ ಓಡಾಡುತ್ತಿದೆ. ಹೋಗಲಿ ಮಟನ್ ತಿಂದಿದ್ದು ಎಲ್ಲಿ ಗೊತ್ತಾ ? ನಾಗಪೂರದಲ್ಲಿ. ಅದು ಯವಾಗ ಅಂತಿರಿ ? ಅದು ಬಿಜೆಪಿಗರ ಪ್ರಭು ಶ್ರೀ ರಾಮನವಮಿಯಂದು..