ಬೀದರ್ಸುವರ್ಣ ಗಿರಿ ಟೈಮ್ಸ್

ಮುಂದಿನ ವರ್ಷದಿಂದ ರಾಜ್ಯದಲ್ಲಿ ‘ವಚನಗಳ ವಿಶ್ವವಿದ್ಯಾಲಯ’ : ಸಿ. ಎಂ.

ಬೀದರ: ಮುಂದಿನ ವರ್ಷದಿಂದ ರಾಜ್ಯದಲ್ಲಿ ಹನ್ನೆರಡ ಶತಮಾನದ ಸಮಾನತೆಯ ಹರಿಕಾರರ ಬಗ್ಗೆ ಬಸವಕಲ್ಯಾಣದಲ್ಲಿ ‘ವಚನಗಳ ವಿಶ್ವವಿದ್ಯಾಲಯ’ ಸ್ಥಾಪನೆ ಮಾಡಲಾಗುವದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿದರಲ್ಲಿ ೧೬೦ ಶರಣರು ಕೂಡಿ ಸಿದ್ದರಾಮಯ್ಯ ಸರಕಾರವು ರಾಜ್ಯದಲ್ಲಿ ಬಸವೇಶ್ವರರನ್ನು ಸಾಂಸ್ಕ್ರತಿಕ ನಾಯಕನನ್ನಾಗಿ ಘೋಷಣೆ ಮಾಡಿದ್ದರ ನೆನಪಿಗಾಗಿ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆ ಸಮಯದಲ್ಲಿ ಮಾತನಾಡಿದ ಸಿ ಎಂ ಸಿದ್ದರಾಮಯ್ಯ ಹನ್ನೆರಡನೆಯ ಶತಮಾನದಲ್ಲಿ ಶರಣರು ಸಂಸ್ಕ್ರತ ಭಾಷೆಯನ್ನು ವಿರೋದಿಸಿ ಕನ್ನಡದಲ್ಲಿ ವಚನಗಳನ್ನು ಸೃಷ್ಟಿ ಮಾಡಿದ್ದರು. ಅದರ ಜೊತೆ ಜ್ಯಾತಿ ರಹಿತ ಸಮಾನತೆಯ ಸಮಾಜವನ್ನು ಕಟ್ಟಲು ಅನುಭವ ಮಂಟಪವನ್ನು ಕಟ್ಟಿದ್ದರು ಅದಕ್ಕಾಗಿ ನಾನು ಬುದ್ಧ ಬಸವ ಡಾ ಅಂಬೇಡ್ಕರರ ಮಾರ್ಗದಲ್ಲಿ ಸರಕಾರವನ್ನು ಒಯ್ಯುತ್ತಿದ್ದು ಸಾಮಾನ್ಯ ಜನ ಕೂಡಾ ಚಿಂತನೆಗಳನ್ನು ಅರಿವು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಮೂರು ಸಾವಿರ ಮಠದ ಜಗದ್ಗುರು ಸಿದ್ದರಾಜಯೋಗಿಂದ್ರ ಮಹಾಸ್ವಾಮಿ ಅಧ್ಯಕ್ಷತೆ ವಹಿಸಿದ್ದರು, ಅಖಿಲ ಭಾರತದ ವೀರಶೈವ- ಲಿಂಗಾಯತ ಮಹಾಸಭಾ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಕೂಡಾ ವೇದಿಕೆಯ ಮೇಲೆ ಇದ್ದರು.

Related Articles

Leave a Reply

Your email address will not be published. Required fields are marked *

Back to top button