Notice: Function _load_textdomain_just_in_time was called incorrectly. Translation loading for the loginizer domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home2/suvarnagiritimes/public_html/wp-includes/functions.php on line 6114
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಶ್ರಾಂತ ಕುಲಪತಿ ಮಹೇಶಪ್ಪ ವಿರುದ್ಧ ಸಿವಿಲ್ ದಾವೆ: ನಷ್ಟ ವಸೂಲಿಗೆ ರಾಜ್ಯಪಾಲರ ಅನುಮೋದನೆ. - suvarna giri times
ಬೆಂಗಳೂರುಸುವರ್ಣ ಗಿರಿ ಟೈಮ್ಸ್

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಶ್ರಾಂತ ಕುಲಪತಿ ಮಹೇಶಪ್ಪ ವಿರುದ್ಧ ಸಿವಿಲ್ ದಾವೆ: ನಷ್ಟ ವಸೂಲಿಗೆ ರಾಜ್ಯಪಾಲರ ಅನುಮೋದನೆ.

ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪ್ರೊ ಹೆಚ್ ಮಹೇಶಪ್ಪ ಅವರ ವಿರುದ್ಧ ಸಿವಿಲ್ ದಾವೆ ಮತ್ತು ಈಗಾಗಲೇ ಉಂಟಾಗಿರುವ ಆರ್ಥಿಕ ನಷ್ಟ ವಸೂಲಿ ಮಾಡಲು ಹಾಲಿ ಕುಲಪತಿ ಮತ್ತು ಕುಲಸಚಿವರಿಗೆ ನಿರ್ದೇಶನ ನೀಡಲು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ಅನುಮೋದನೆ ನೀಡಿದ್ದಾರೆಂದು ಸಾಮಾಜಿಕಜಾಲತಾನದ ಸುದ್ಧಿವಾಹಿನಿಯೊಂದು ವರದಿ ಮಾಡಿದೆ.

ಅಲ್ಲದೇ ಸಿವಿಲ್ ದಾವೆ ದಾಖಲಾದ ಕೂಡಲೇ ಬಾಧಿತ ಮಹೇಶಪ್ಪ ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲು ಅವಕಾಶ ಸಿಗದಂತೆ ತಕ್ಷಣವೇ ವಿಶ್ವವಿದ್ಯಾಲಯದ ಹಾಲಿ ಕುಲಪತಿ, ಕುಲಸಚಿವರು ಕೇವಿಯಟ್ ಅರ್ಜಿ ದಾಖಲಿಸಲು ಸಹ ಉನ್ನತ ಶಿಕ್ಷಣ ಇಲಾಖೆಯು ನಿರ್ದೇಶನ ನೀಡಿದೆ.

ಪ್ರೊ. ಹೆಚ್ ಮಹೇಶಪ್ಪ ಅವರು ಕುಲಪತಿ ಆಗಿದ್ದ ಅವಧಿಯಲ್ಲಿ ಬೋಧಕ ವೃಂದದ ನೇಮಕಾತಿ, ಸಿವಿಲ್ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾಗಿದ್ದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕೇಶವ ನಾರಾಯಣ್ ಸಮಿತಿ, ಮತ್ತೊಬ್ಬ ನ್ಯಾಯಾಧೀಶ ಅಶೋಕ್ ಬಿ ಇಂಚಿಗೇರಿ ಸೇರಿದಂತೆ ಇನ್ನಿತರೆ ತನಿಖಾ ಸಮಿತಿಗಳು ವರದಿ ನೀಡಿದ್ದವು. ಈ ಪೈಕಿ ಅಶೋಕ್ ಇಂಚಿಗೇರಿ ಅವರು ನೀಡಿದ್ದ ವರದಿ ಆಧರಿಸಿ ಸಿವಿಲ್ ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರವು ರಾಜ್ಯಪಾಲರ ಅನುಮೋದನೆ ಕೋರಿತ್ತು.

ಸರ್ಕಾರವು ಸಲ್ಲಿಸಿದ್ದ ಅನುಮೋದನೆ ಪ್ರಸ್ತಾವನೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು 2024ರ ಫೆ. 16ರಂದೇ ಒಪ್ಪಿಗೆ ನೀಡಿದ್ದರು. ಈ ಸಂಬಂಧ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರಿಗೆ ನಿರ್ದೇಶನ ನೀಡಿರುವ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 2024ರ ಫೆ.29ರಂದು ಪತ್ರ (ED 03 TGL 2024) ಬರೆದಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ಸಚಿವ ಡಾ ಎಂ ಸಿ ಸುಧಾಕರ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಎಚ್ ಬಿ ವಾಲೀಕಾರ್ ಅವರ ವಿರುದ್ಧದ ಸಿವಿಲ್‌ ಮತ್ತು ಕ್ರಿಮಿನಲ್ ಮೊಕದ್ದಮೆ ಸಂಬಂಧದ ಕಾರ್ಯನಿರ್ವಹಣೆ ವರದಿಯನ್ನು ರಾಜ್ಯಪಾಲರು ಇತ್ತೀಚೆಗಷ್ಟೇ ಕೇಳಿದ್ದರು. ಇದರ ಬೆನ್ನಲ್ಲೇ ಇದೀಗ ವಿಟಿಯುನಲ್ಲಿ ಭಾಗಿಯಾಗಿದ್ದಾರೆ ಗುರಿಯಾಗಿರುವ ನಡೆದಿರುವ ಅಕ್ರಮಗಳಲ್ಲಿ ಎಂದು ಆರೋಪಕ್ಕೆ ಮಹೇಶಪ್ಪ ಮತ್ತು ಕುಲಸಚಿವ ಡಾ ಕೆ ಇ ಪ್ರಕಾಶ್ ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮೋದನೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಹಿಂದಿನ ಉಪ ಕುಲಪತಿಗಳಾದ ಪ್ರೊ ಹೆಚ್ ಮಹೇಶವ ಅವರ ಕರ್ತವ್ಯ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಆಗಿರುವ ಆರ್ಥಿಕ ನಷ್ಟದ ಕುರಿತು ಲಭ್ಯವಿರುವ ದಾಖಲೆಗಳು ಮತ್ತು ಪುರಾವೆಗಳ ಆಧಾರದ ಮೇಲೆ ಇವರ ವಿರುದ್ಧ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿ ವಿಶ್ವವಿದ್ಯಾಲಯಕ್ಕೆ ಆಗಿರುವ ಆರ್ಥಿಕ ನಷ್ಟವನ್ನು ವಸೂಲು ಮಾಡಲು ಹಾಗೂ ತಕ್ಷಣವೇ ಕಾನೂನು ರೀತಿ ಕ್ರಮ ಕೈಗೊಳ್ಳಲು ವಿಶ್ವವಿದ್ಯಾಲಯದ ಪ್ರಸ್ತುತ ಉಪ ಕುಲಪತಿ ಹಾಗೂ ಕುಲಸಚಿವರಿಗೆ ನಿರ್ದೇಶನ ನೀಡುವ ಬಗ್ಗೆ ರಾಜ್ಯಪಾಲರು 2024ರ ಫೆ.16ರಂದು ಅನುಮೋದನೆ ನೀಡಿದ್ದಾರೆ’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಆಶೋಕ್ ಬಿ ಹಿಂಚಿಗೇರಿ ಅವರ ನೇತೃತ್ವದ ಏಕ ಸದಸ್ಯ ಸಮಿತಿಯಲ್ಲಿ ಹಿಂದಿನ ಉಪ ಕುಲಪತಿ ಡಾ. ಹೆಚ್ ಮಹೇಶಪ್ಪ ಮತ್ತು ಹಿಂದಿನ ಕುಲಸಚಿವ ಡಾ ಕೆ ಇ ಪ್ರಕಾಶ್ ಅವರ ವಿರುದ್ಧ ಸಿವಿಲ್ ದಾವೆ ಹೂಡಲು ಮತ್ತು ನಷ್ಟವನ್ನ ವಸೂಲು ಮಾಡಲು ಶಿಫಾರಸ್ಸು ಮಾಡಿತ್ತು. ಇದನ್ನು ವಿಟಿಯುನ 156 ಕಾರ್ಯಕಾರಿ ಪರಿಷತ್ ಸಭೆಯಲ್ಲಿ ತೀರ್ಮಾನ ಕೈಗೊಂಡಿತ್ತು.

ಮಹೇಶಪ್ಪ ಅವರ ವಿರುದ್ಧ ಕೇಳಿ ಬಂದಿದ್ದ 24 ಆರೋಪಗಳ ತನಿಖೆ ನಡೆಸಲು ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ ಎನ್ ಕೇಶವನಾರಾಯಣ ಅವರ ನೇತೃತ್ವದಲ್ಲಿ ತನಿಖೆ ತಂಡ ರಚಿಸಿದ್ದರು.

ಈ ಸಮಿತಿಯು ತನಿಖೆ ನಡೆಸಿದ್ದ ಪ್ರಕರಣಗಳ ವಿವರ

ಬೆಳಗಾವಿ ವಿಟಿಯು ಕ್ಯಾಂಪಸ್‌ಗೆ ನೀರು ಪೂರೈಕೆಗಾಗಿ ಅನಗತ್ಯವಾಗಿ 3.32 ಕೋಟಿ ಖರ್ಚು, ಸ್ಥಗಿತಗೊಂಡಿರುವ ಇ-ವಿದ್ಯಾ ಆನ್‌ಲೈನ್ ಕಲಿಕಾ ವ್ಯವಸ್ಥೆಗೆ 3.07 ಕೋಟಿ ವೆಚ್ಚ, ಅವಧಿ ಠೇವಣಿ ಬಡ್ಡಿಯಲ್ಲಿ 1.15 ಕೋಟಿ ನಷ್ಟ, ಸಾಫ್ಟ್‌ವೇ‌ರ್ ಖರೀದಿ ಮತ್ತು ನಿಗದಿತ ಸಮಯದಲ್ಲಿ ಪ್ರಯೋಗಾಲಯ ಸ್ಥಾಪಿಸದೇ ಸಾಫ್ಟ್‌ವೇರ್ ಬಳಸದೇ ಅನಗತ್ಯ ಖರ್ಚು 75.5 ಲಕ್ಷ, ಪರೀಕ್ಷಾ ವಿಭಾಗಕ್ಕೆ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಅಳವಡಿಕೆಗಾಗಿ ವಿವೇಚನೆ ಇಲ್ಲದೇ ಟೆಂಡರ್‌ ಸ್ವೀಕಾರ. ಮಿತಿ ಮೀರಿದ ದರಕ್ಕೆ ವಿಟಿಯುನ ಪರೀಕ್ಷಾ ಮೇಲ್ವಿಚಾರಣೆ ವ್ಯವಸ್ಥೆ ಹೊರಗುತ್ತಿಗೆ ನೀಡಿರುವುದು,‌ ವಿವಿ ಕಾಲೇಜು ಬೋಧಕ ಸಿಬ್ಬಂದಿಗೆ 41.93 ಕೋಟಿ ಪಾವತಿ, ಭೋಜನ ಶಾಲೆ ನಿರ್ಮಾಣಕ್ಕೆ ಟೆಂಡರಲ್ಲಿ ಪಡೆದವರು ಮಿತಿಗಿಂತ ಹೆಚ್ಚು ದರ ಉಲ್ಲೇಖಿಸಿದ್ದರೂ ಮರು ಟೆಂಡರ್ ಕರೆಯುವ ಆಯ್ಕೆಯನ್ನು ಪರಿಗಣಿಸದೇ ಇದ್ದದ್ದು, ಬೆಳಗಾವಿ ವಿಟಿಯುನಲ್ಲಿ ಎರಡನೇ ಹಂತದ ಸಿವಿಲ್ ಕಾಮಗಾರಿಗೆ ಸಂಬಂಧಿಸಿದಂತೆ ಹೈದರಾಬಾದ್‌ನ ರಾಮ್‌ಕಿ ಇನ್ನಾಸ್ಟಕ್ಟರ್ ಕಂಪನಿಯಿಂದ 50.20 ಲಕ್ಷ ರಾಯಧನ ಪಡೆಯದೇ ಇದ್ದದ್ದು, ವಿಟಿಯು ಕ್ಯಾಂಪಸ್‌ನಲ್ಲಿ ಡಾಟಾ ಸೆಂಟರ್ ಅಳವಡಿಕೆಗೆ 35.35 ಲಕ್ಷ ವೆಚ್ಚಮಾಡಿದ್ದು, ಬಳ್ಳಾರಿಯ ಸುಗಣ ಕನ್‌ಸ್ಟ್ರಕ್ಷನ್ಸ್ ಉಲ್ಲೇಖಿಸಿದ್ದ ಅತ್ಯಂತ ಕಡಿಮೆ 21.90 ಲಕ್ಷ ಮೊತ್ತದ ಟೆಂಡರ್‌ನಿಂದ ಆದ ನಷ್ಟ, ಬೆಳಗಾವಿ ವಿಟಿಯು ಅತಿಥಿ ಗೃಹದ ವಿಸ್ತರಣೆಗಾಗಿ ಎಸ್ ಡಿ ಗೌರವ್ ಎಂಬುವರಿಗೆ ಅನಧಿಕೃತವಾಗಿ ಹಣ ಪಾವತಿ ಮಾಡಿದ್ದು, ಗುತ್ತಿಗೆ ನಿಯಮಗಳಿಗೆ ವಿರುದ್ಧವಾಗಿ ಟೀಕಯಾಸ್ ಸೊಲ್ಯೂಷನ್ಸ್ ಕಂಪನಿಗೆ 1.32 ಕೋಟಿ ಮೊತ್ತವನ್ನು ಮೊದಲೇ ಪಾವತಿಸಿದ್ದು, ಕಲ್ಬುರ್ಗಿಯಲ್ಲಿರುವ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ 2.25 ಕೋಟಿ ಮೊತ್ತದ ಅವ್ಯವಹಾರ, ಟೆಂಡ‌ರ್ ನಿಯಮ ಪಾಲಿಸದೇ ಎಎಂಸಿ ಡಿಜಿಟಲ್ ಡುಪ್ಲಿಕೇಟರ್ಸ್ ಸಂಸ್ಥೆಗೆ 13.35 ಲಕ್ಷ ಮೊತ್ತದ ಗುತ್ತಿಗೆ ನೀಡಿಕೆ, ಟೆಂಡ‌ರ್ ನಿಯಮ ಪಾಲಿಸದೇ 500 ಕಂಪ್ಯೂಟರ್‌ಗಳಿಗೆ 31 ಲಕ್ಷ ವೆಚ್ಚದಲ್ಲಿ ಮೈಕ್ರೋ ಸಾಫ್ಟ್‌ವೇರ್ ಮತ್ತು 15.20 ಲಕ್ಷ ಮೊತ್ತದ ಡ್ಯುಪ್ಲೋ ಮಾಸ್ಟರ್ ರೋಲ್ಸ್ ಹಾಗೂ ಡ್ಯುಪ್ಲೋ ಇಂಕ್ ಪೌಚ್‌ಗಳ ಖರೀದಿ, ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ಮೈಸೂರು ಮತ್ತು ಬೆಳಗಾವಿಯ ಡಾಟಾ ಸೆಂಟರ್‌ಗಳಿಗೆ ಕಲಿಕಾ ಮೇಲ್ವಿಚಾರಣೆ ವ್ಯವಸ್ಥೆ ಅಳವಡಿಕೆ
ಜ್ಞಾನ-ಎಕ್ಸ್ ಅಡಿಯಲ್ಲಿ ಇ-ಕಲಿಕೆ ಶುಲ್ಕವಾದ 1.4 ಕೋಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, 26.25 ಲಕ್ಷ ವೆಚ್ಚದಲ್ಲಿ ಅಳವಡಿಸಿದ್ದ ಸ್ವಯಂ ಚಾಲನಾ ತಂತ್ರಾಂಶವೊಂದು ನಿಷ್ಪಯೋಜಕವಾಗಿರುವುದು ಕೆಲಸ 168 ಬೋಧಕ ಸಿಬ್ಬಂದಿ ನೇಮಕದಲ್ಲಿ ಅವ್ಯವಹಾರ, ವಿಟಿಯುನ ಕಾರ್ಯಕಾರಿ ಮಂಡಳಿಯ ಯುಜಿಸಿ ನಾಮನಿರ್ದೇಶಿತ ಸದಸ್ಯರನ್ನಾಗಿ ರಾಜ್ಯಪಾಲರು ನೇಮಕ ಮಾಡಿದ್ದನ್ನು ಗೌರವಿಸದೇ ಮತ್ತು ಪಾಲಿಸದೇ ಇದ್ದದ್ದು ವಿದ್ಯಾರ್ಥಿಗಳ ಕೋರ್ಸ್ ಮತ್ತು ಕಾಲೇಜು ಬದಲಾವಣೆಗೆ ಸಂಬಂಧಿಸಿದಂತೆ ನಡೆದ ಅಕ್ರಮ ಕಾಲೇಜೂ ವಿವಿ ನಡೆಸಿದ ವಿವಿಧ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದಲ್ಲಿನ ಅವ್ಯವಹಾರಗಳು.

ಹೀಗೆ ವಿವಿಯ ಶೈಕ್ಷಣಿಕ ಮತ್ತು ಆಡಳಿತ ಸಂಬಂಧಿಸಿದ ಇತರ ಯಾವುದೇ ಪ್ರಕರಣ ಕುರಿತು ತನಿಖೆ ನಡೆಸಲು ಸೂಚಿಸಿದ್ದನ್ನು ಸ್ಮರಿಸಬಹುದು ಎಂದು ‘ದಿ ಫೈಲ್ ವರದಿ ಮಾಡಿದೆ’.

Related Articles

Leave a Reply

Your email address will not be published. Required fields are marked *

Back to top button