ಕಲಬುರಗಿಸುವರ್ಣ ಗಿರಿ ಟೈಮ್ಸ್

‘ಪ್ರೀತಿಯನ್ನು’ ನಿರಾಕರಿಸಿದಕ್ಕೆ ಘೋರ ಕೃತ್ಯ: ಅಪ್ರಾಪ್ತ ಬಾಲಕರಿಂದ 10ನೇ ತರಗತಿ ವಿದ್ಯಾರ್ಥಿನಿಗೆ ಚಾಕು ಇರಿತ.

ಕಲಬುರಗಿ: ಪ್ರೀತಿಯನ್ನು ಒಪ್ಪದಿದ್ದಕ್ಕೆ ಸರ್ಕಾರಿ ಬಸ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಬಸ್‌ನಿಂದ ಇಳಿಸಿ 9ನೇ ತರಗತಿ ವಿದ್ಯಾರ್ಥಿಗಳಿಬ್ಬರು ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ತೀವ್ರ ಹಲ್ಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಬೆಳಮಗಿ ಹಾಗೂ ಅಟ್ಟೂರ್‌ಕ್ರಾಸ್ ಬಳಿ ಗುರುವಾರ ನಡೆದಿದೆ.

ಘಟನೆಗೆ ಕಾರಣರಾದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. 9ನೇ ಕ್ಲಾಸ್ ಬಾಲಕ ತನ್ನೂರಿನ 10ನೇ ಕ್ಲಾಸ್ ಬಾಲಕಿಯನ್ನು ಪ್ರೀತಿಸುತ್ತಿದ್ದ. ತಿಂಗಳ ಹಿಂದೆ ಈ ಬಗ್ಗೆ ಹೇಳಿದಾಗ ಬಾಲಕಿ, ನಾವಿನ್ನೂ ಚಿಕ್ಕವರು, ಓದುವಾಗ ಇವೆಲ್ಲ ಬೇಡ ಎಂದು ಆತನಿಗೆ ಬುದ್ದಿವಾದ ಹೇಳಿದ್ದಳು.

ಆದರೂ ಕೂಡ ಬಾಲಕ ಬುದ್ಧಿ ಕಲಿತಿರಲಿಲ್ಲ ಬಾಲಕಿ ಪ್ರೀತಿ ನಿರಾಕರಿಸಿದಕ್ಕೆ ಕೋಪಗೊಂಡಿದ್ದ ಬಾಲಕ ತನ್ನ ಗೆಳೆಯರ ಸಹಾಯದಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಬಾಲಕಿಗೆ ಚಾಕು ಹಾಕಿದ್ದ ಬಾಲಕರು ಶಾಲೆಗೆ ಹೋಗಿ ತರಗತಿಯಲ್ಲಿ ಕುಳಿತಿದ್ದರು. ಅಲ್ಲಿಗೆ ಹೋಗಿ ಪೊಲೀಸರು ಬಂಧಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button