ಬೆಳಗಾವಿಸುವರ್ಣ ಗಿರಿ ಟೈಮ್ಸ್

ಕನ್ನಡ ನಾಮಫಲ ಸುಗ್ರೀವಾಙ್ಞೆ ವಾಪಸ್: ಕನ್ನಡ ಪರ ಹೋರಾಟಗಾರ ಸಂಜು ಬಡಿಗೇರ ಪ್ರತಿಕ್ರಿಯೆ.

ಚಿಕ್ಕೋಡಿ: ನಾಮಫಲಕದಲ್ಲಿ ಪ್ರತಿಶತ 60 ರಷ್ಟು ಕನ್ನಡ ಸುಗ್ರೀವಾಙ್ಞೆ ವಾಪಸ್ ಕಳಿಸಿದ ರಾಜ್ಯಪಾಲರ ನಡೆ ಕನ್ನಡಿಗರ ವಿರೋಧಿ ನಿಲುವನ್ನು ಎದ್ದು ತೋರಿಸುತ್ತಿದೆ, ಕರ್ನಾಟಕದಲ್ಲಿ ವಾಣಿಜ್ಯ ಸಂಸ್ಥೆಗಳ, ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಪ್ರತಿಶತ 60 ರಷ್ಟು ಕನ್ನಡವೇ ಇರಬೇಕು ಎಂದು ಕಡ್ಡಾಯಗೊಳಿಸಿರುವ ರಾಜ್ಯ ಸರಕಾರ ನೀತಿ ಸ್ವಾಗತಾರ್ಹವಾಗಿದೆ, ಈ ಸಂಬಂಧದ ಸುಗ್ರೀವಾಙ್ಞೆಗೆ ಸಹಿ ಹಾಕಲು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲ ಥಾವರಚಂದ್ ಗೆಲ್ಹೊಟ್ ಅವರು ಸುಗ್ರೀವಾಙ್ಞೆಗೆ ಸಹಿ ಹಾಕದೇ ಸರಕಾರಕ್ಕೆ ವಾಪಸ್ ಕಳಿಸಿದ್ದಾರೆ.

ರಾಜ್ಯಪಾಲರ ಈ ನಡೆಯು ಕರ್ನಾಟಕ ಹಾಗೂ ಕನ್ನಡಿಗರ ಮನಸ್ಸಿಗೆ ನೋವು ಉಂಟು ಮಾಡಿದೆ. ದೇಶದ ಕೆಲವು ಬಿಜೆಪಿ ಯೇತರ ಸರಕಾರವಿರುವ ರಾಜ್ಯಗಳ ರಾಜ್ಯಪಾಲರು ಈಗಾಗಲೇ ಅಲ್ಲಿಯ ಸರಕಾರಗಳೊಂದಿಗೆ ಸಂಘರ್ಷಕ್ಕೆ ಇಳಿದಿರುವ ಉದಾಹರನೆಗಳಿವೆ, ಆ ರಾಜ್ಯಪಾಲರ ದಾರಿಯಲ್ಲಿಯೇ ಗೆಲ್ಹೊಟ್ ಅವರೂ ಸಹ ಹೊರಟಿದ್ದು ಖಂಡನೀಯವಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಡೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ರಾಜ್ಯದ ಕನ್ನಡಿಗರಿಗೆ ಅವರು ನೀಡಿದ ಭರವಸೆಯಂತೆ ಫೆಬ್ರುವರಿ 28 ರ ಗಡುವಿಗೆ ಸರಕಾರ ಬದ್ಧವಿರುತ್ತದ್ದೆಯೋ ಕಾದು ನೋಡ ಬೇಕಾಗಿದೆ. ಒಂದು ವೇಳೆ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಅನ್ಯಾಯವಾದರೆ ರಾಜ್ಯಪಾಲರ ವಿರುದ್ಧವಾಗಿ ರಾಜ್ಯವ್ಯಾಪ್ತಿ ಪ್ರತಿಭಟನೆಗಳು ನಡೆಯಲಿವೆ ಎಂದು ಚಿಕ್ಕೋಡಿ ಪಟ್ಟಣದ ಕನ್ನಡ ಪರ ಹೋರಾಟಗಾರರಾದ ಸಂಜು ಬಡಿಗೇರ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button