ಇಂದು ಭಾರತೀಯ ಮತದಾರ ದಿನ…!

“ನೀವು ಯಾರಿಗಾಗಿ ರಾಜಕೀಯ ಹಕ್ಕು ಅಥವಾ ಮತದಾನದ ಹಕ್ಕು ಕೇಳುತ್ತಿದ್ದಿರೋ ಆ ನಿಮ್ಮ ಜನ ತಮ್ಮ ಸಮುದಾಯದ ಒಳಿತಿಗಾಗಿ ಮತಾಧಿಕಾರ ಬಳಸಿಕೊಳ್ಳುವಂತ ಅರಿವು ಹೊಂದಿದ್ದಾರೆಯೇ ?!”
ಹೀಗೆ ಈ ಮೇಲಿನ ಪ್ರಶ್ನೇಯನ್ನು ಭಾರತೀಯ ಶಾಸನಬದ್ಧ ಆಯೋಗ ಕೇಳಿದಾಗ ಬಾಬಾಸಾಹೇಬರು ಬಹಳಷ್ಟು ಅರ್ಥಪೂರ್ಣವಾಗಿ ಹೀಗೆ ಆಯೋಗದ ಮುಂದೆ ಉತ್ತರ ನೀಡುತ್ತಾರೆ. ಅದು ನಾನು ಯಾರಿಗಾಗಿ ಈ ಹಕ್ಕುಗಳನ್ನು ಕೇಳುತ್ತಿದ್ದೇನೆಯೋ ಆ ಜನ ತಮ್ಮ ಬುದ್ಧಿಮತ್ತೆಯಿಂದ ಸರಿಯಾಗಿ ಮತ ಚಲಾಯಿಸುತ್ತಾರೆ. ಏಕೆಂದರೆ ಅವರು ತಮ್ಮ -ತಮ್ಮ ಬದುಕಿನಲ್ಲಿ ಅಶ್ಪ್ರುಶ್ಯತೆಯ ಅಥವಾ ಕೆಳಜಾತಿಯಿಂದಾಗಿ ಅತ್ಯಂತ ಕೆಟ್ಟದಾದ ಪರಿಸ್ಥಿತಿಗಳನ್ನು ಎದುರಿಸಿದ್ದರಿಂದ ಸದಾ ಎಚ್ಚರಾಗಿರುತ್ತಾರೆ ಹಾಗೂ ಹಿಂದಿದ್ದ ಅಮಾನವೀಯ ಸಂಕೋಲೆಗಳನ್ನು ಕಳಚಿಕೊಂಡು ಮೇಲೇಳಬೇಕಿರುವುದಕ್ಕೆ ರಾಜಕೀಯ ಅಧಿಕಾರ ಮುಖ್ಯವೆಂಬುದನ್ನು ಮನಗಂಡು ಸರಿಯಾದ ಮತಾಧಿಕಾರ ಚಲಾಯಿಸುತ್ತಾರೆ…” ಹೀಗೆ ಬಾಬಾಸಾಹೇಬರು ಉತ್ತರಿಸಿ ಮುಂದೆ ಸಂವಿಧಾನ ಬದ್ಧ ಹಕ್ಕನ್ನಾಗಿಸಿದ್ದಿದೆ. ಅದಕ್ಕಾಗಿ ನಾವಿಂದು ಬಾಬಾಸಾಹೇಬರನ್ನು ನೆನೆದುಕೊಳ್ಳಬೇಕು.
ಮತದಾನ ಮಾಡುವುದು ಈ ದೇಶದ ಪ್ರತಿಯೊಬ್ಬ ವಯಸ್ಕ ನಾಗರಿಕನ ಅಥವಾ ನಾಗರಿಕಳ ಹಕ್ಕು. ಅದು ಈ ದೇಶದ ಅದಾನಿ -ಅಂಬಾನಿಗಳ ಮತದ ಮೌಲ್ಯದಷ್ಟೇ ಸಮಾಜದ ಕಟ್ಟಕಡೆಯ ಜೀತದಾಳು ಅಥವಾ ಬಿಕ್ಷುಕ, ಕ್ಷುಲ್ಲಕ ವ್ಯಕ್ತಿಗಳೆನಿಸಿಕೊಂಡವರ ಮತಕ್ಕೂ ಸಹ ಅಷ್ಟೇ ಮೌಲ್ಯವಿದೆ. ಅದಕ್ಕಾಗಿಯೇ ಪ್ರಜಾಪ್ರಭುತ್ವ ಅಷ್ಟಿಷ್ಟು ಜೀವಂತವಿದೆ.
ಈ ಮತದಾನದ ಹಕ್ಕು ಸುಮ್ಮನೆ ಬಂದುದಲ್ಲ. ಬಹುಸಂಖ್ಯಾತ ಮಹಿಳೆ, ದಲಿತ, ಅಲ್ಪ ಸಂಖ್ಯಾತ ಮತ್ತು ಕೆಳ ವರ್ಗದವರನ್ನು ಮುಖ್ಯವಾಗಿ ಅನಕ್ಷರತೆ ಮತ್ತು ಜಾತಿ-ಆದಾಯ -ಅಂತಸ್ತುಗಳು ಇತ್ಯಾದಿ ಆಧಾರದಲ್ಲಿ ಮತದಾನದ ಹಕ್ಕನ್ನು ನಿರಾಕರಿಸುವ ಕೆಲಸಗಳು ನಡೆದಿದ್ದವು. ಆದರೆ ಈ ಅಸಮಾನ ಮತ್ತು ಜಾತಿವಾದದ ನಿರ್ಣಯಗಳಿಗೆ ಬಾಬಾಸಾಹೇಬರು ಬಹು ದೊಡ್ಡ ಪ್ರತಿರೋದ ಒಡ್ಡಿದ್ದರಿOದ ಭಾರತೀಯರೆಲ್ಲರಿಗೂ ಮತದಾನದ ಹಕ್ಕು ದೊರೆಯುವಂತಾಯಿತು.
ಮತದಾನದ ಹಕ್ಕು ಒತ್ತಟ್ಟಿಗಿರಲಿ. ಈ ದೇಶದ ರಾಜ್ಯ ವೊಂದರಲ್ಲಿ ಅವಿಧ್ಯಾವಂತರು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ದಿಸುವುದನ್ನು ನಿರ್ಬಂಧಿಸಲಾಗಿದೆ! ಇದು ಎಷ್ಟು ಸರಿ ?! ಹಂತ -ಹಂತವಾಗಿ ಎಲ್ಲಕಡೆ ವಿಸ್ತರಿಸುವ ಹುನ್ನಾರ ಅಡಗಿದೆ !?ಅದಕ್ಕಾಗಿ ಮತದಾನದ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕಾದ ಜವಾಬ್ದಾರಿ ಜನಸಾಮಾನ್ಯರ ಮೇಲಿದೆ. ಸ್ವತಂತ್ರ ಭಾರತದಲ್ಲಿ ವಿವೇಚನೆಯಿಂದ ಬಳಸುತ್ತಾರೆಂದು ಇದನ್ನೇ ನಂಬಿ ಬಾಬಾಸಾಹೇಬರು ಜನಸಾಮಾನ್ಯರು ಇನ್ನೆOದೂ ಜಾತಿವಾದದ ಕ್ರೂರ ದಬ್ಬಾಳಿಕೆಗಳಿಗೆ ಒಳಗಾಗದೆ ಸ್ವತಂತ್ರರಾಗಿ ಬದುಕುತ್ತಾರೆಂದು ಯೋಚಿಸಿದ್ದರು.
ಅಂದು ಭಾರತೀಯ ಶಾಸನ ಸಭೆ ಆಯೋಗವು ಬಾಬಾಸಾಹೇಬರಿಗೆ ಈ ದೇಶದಲ್ಲಿ ಅವಿದ್ಯಾವಂತರು ತುಂಬಿತುಳುಕುತ್ತಿದ್ದಾರೆ, ಇವರಿಗೆ ಮತದಾನ ಹಕ್ಕು ಕೊಟ್ಟರೆ ತಮ್ಮ ಅಜ್ಞಾನದಿOದ ತಪ್ಪಾಗಿ ಅಂದರೆ ಸರಿ -ತಪ್ಪುಗಳ ಅರಿವಿನ ಕೊರತೆಯಿOದ ತಪ್ಪಾಗಿ ಬಳಸುವುದಿಲ್ಲವೆ ? ಎಂದು ಕೇಳಿದಾಗ ಬಾಬಾಸಾಹೇಬರು “ನನಗೇನು ಹಾಗೆ ಅನಿಸುವುದಿಲ್ಲ “ವೆಂದು ಹೇಳುತ್ತಾರೆ. ಮುಂದುವರೆದು “ಅವಿದ್ಯಾವಂತರಿದ್ದರೂ ಸಹ ಅವರಿಗೆ ತಮಗೇನು ಬೇಕು ಎಂಬುದರ ಅರಿವು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಅದಕ್ಕಾಗಿ ಅಕ್ಷರ ಜ್ಞಾನಕ್ಕೂ ಮತದಾನ ಹಕ್ಕಿಗೂ ಸಂಬಧವಿಲ್ಲ. ಅವಿದ್ಯಾವಂತರಿದ್ದರೂ ಸಹ ಬಹಳಷ್ಟು ಬುದ್ದಿವಂತರಾಗಿರಲೂ ಬಹುದು.ಅವರಲ್ಲಿ ದೈನಂದಿನ ವ್ಯವಹಾರ ಜ್ಞಾನವಿದ್ದೇ ಇರುತ್ತದೆ. ಅದಕ್ಕಾಗಿ ಅನಕ್ಷರತೆ ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ತಪ್ಪು “ಎಂದು ವಾದಿಸುತ್ತಾರೆ. ಇಂಥಹ ಮಾನವೀಯ ಚಿಂತನೆಗಳಿOದಾಗಿ ಮೊದಲಿದ್ದ ಅನಕ್ಷರತೆ, ಗುಡ್ಡಗಾಡು, ಅಪರಾಧಿ ಗುಂಪು, ಮಹಿಳೆ, ಜಾತಿ ತಾರತಮ್ಯಗಳಿಲ್ಲದಂತೆ ಎಲ್ಲರಿಗೂ ಸಿಗುವಂತ ವಯಸ್ಕ ಮತದಾನದ ಹಕ್ಕು ಪ್ರತಿಯೊಬ್ಬರ ಹಕ್ಕಾಗುವಂತೆ ಮಾಡಿದ ಕೀರ್ತಿ ಬಾಬಾಸಾಹೇಬರಿಗೆ ಸಲ್ಲುತ್ತದೆ. ಅದಕ್ಕಾಗಿ ಬಾಬಾಸಾಹೇಬರನ್ನು ನೆನೆಯಬೇಕಾಗುತ್ತದೆ.
ಇಂದು ಪ್ರಾಚೀನ ಸಂಪ್ರದಾಯ, ನಂಬಿಕೆಗಳು ಗರಿಗೆದರಿ ಐಕ್ಯತೆ ಮತ್ತು ಸಮಾನತೆಯನ್ನು ನಾಶಮಾಡುತ್ತಿವೆ. ಸಂವಿಧಾನ ಬದ್ಧವಾದ ಯಾವ ಸಂಸ್ಥೆಗಳು ಚಕ್ರಗಳಾಗಿ ಪ್ರಜಾಸತ್ತೆಯನ್ನು ಮುOದಕ್ಕೆ ಒಯ್ಯಬೇಕಾಗಿದ್ದವೋ ಅವುಗಳಿಂದು ತುಕ್ಕುಹಿಡಿದು ನೆಲಕಚ್ಚುತ್ತಿವೆ. ಹಾಗೆ ಶಕ್ತಿಹೀನವನ್ನಾಗಿಸಲಾಗುತ್ತಿದೆ. ಆದರೆ ನಮ್ಮ ಜನನಾಯಕರು ಮಾಡುತ್ತಿರುವುದೇನು ?! ಈ ದಿಕ್ಕಿನಲ್ಲಿ ಯೋಚಿಸಬೇಕು.
ಡಾ. ಗೌತಮ್ ಬನಸೋಡೆ