ಧಾರವಾಡಸುವರ್ಣ ಗಿರಿ ಟೈಮ್ಸ್
ಮಿನಿ ವಿಧಾನಸೌಧದ ಬಳಿ ವ್ಯಕ್ತಿಗಳ ಹೊಡೆದಾಟ !

ಹುಬ್ಬಳ್ಳಿ: ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಂದೆ-ತಾಯಿಗೆ ತೊಂದರೆ ಮಾಡಿದ್ದಾರೆ ಎಂದು ಹೇಳಿ ಮಿನಿ ವಿಧಾನಸೌಧದಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಹೊಡೆದಾಟ ನಡೆದಿರುವಂತಹ ಘಟನೆ ಜರುಗಿದೆ.
ಹನಮಂತಪ್ಪ ಹಾಗೂ ಮಹೇಶ್ ಗೌಡ ನಡುವೆ ಹೊಡೆದಾಟ ಮಾಡಲಾಗಿದೆ. ನಮ್ಮ ತಂದೆ ತಾಯಿಗೆ ತೊಂದರೆ ಮಾಡಿದ್ದಾರೆ ಅದಕ್ಕೆ ಹೊಡೆದಿದ್ದೇನೆ ಎಂದು ಮಹೇಶ್ ಗೌಡ ಹೇಳಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಹನಮಂತಪ್ಪ ಉಪನಗರ ಪೊಲೀಸ್ ಠಾಣೆಗೆ ಓಡಿಹೋಗಿದ್ದಾರೆ. ಬಳಿಕ ಉಪನಗರ ಪೊಲೀಸರು ಜಗಳವನ್ನು ಬಿಡಿಸಿದ್ದಾರೆ.