ಮೆಕ್ಕೆಜೋಳ ಚೀಲಗಳು ಬಿದ್ದು ಕಾರ್ಮಿಕರ ದುರ್ಮರಣ !!
ವಿಜಯಪುರ: ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್ ಜೋಳ ಏಕಾಏಕಿ ಕುಸಿದು ಅದರ ರಾಶಿಯೊಳಗೆ 10 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ ಘಟನೆ ವಿಜಯಪುರ ಕೈಗಾರಿಕಾ ಪ್ರದೇಶದ ರಾಜಗುರು ಇಂಡಸ್ಟ್ರಿಸ್ ನಲ್ಲಿ ಸೋಮವಾರ ಸಂಜೆ ನಡೆದಿದೆ.
ರಾಜೇಶ್ ಮುಖಿಯಾ(25), ರಾಮರಾಜ್ ಮುಖಿಯಾ(29), ಸಂಬೂ ಮುಖಿಯಾ(26) ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ದುರಂತದಲ್ಲಿ ಮೃತಪಟ್ಟವರು ಬಿಹಾರ ಮೂಲದ ಕಾರ್ಮಿಕರಾಗಿದ್ದಾರೆ. ಅವಶೇಷಗಳಡಿ ಸಿಲುಕಿ 6-7 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಉಳಿದವರನ್ನು ಹೊರ ತೆಗೆಯಲು ಕಾರ್ಯಾಚರಣೆ ಮುಂದುವರೆದಿದೆ.
ಜಿಲ್ಲಾಧಿಕಾರಿ ಭೂಬಾಲನ್, ಎಸ್.ಪಿ. ಹೃಷಿಕೇಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿದ್ದು, ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆಜೋಳ ಚೀಲಗಳ ರಾಶಿ ಕುಸಿದು ದುರಂತ ಸಂಭವಿಸಿದೆ. ಈವರೆಗೂ ಮೂವರು ಕಾರ್ಮಿಕರ ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ.