ಬೇಗೂರು ಹೆದ್ದಾರಿ ಪಕ್ಕದ ಮೋರಿಯಲ್ಲಿ 3 ದಿನಗಳ ‘ಹಸುಗೂಸು’ ಪತ್ತೆ !!

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ಬಳಿಯ್ಲಲಿನ ಹೆದ್ದಾರಿ ಪಕ್ಕದ ಮೋರಿಯಲ್ಲಿ 3 ದಿನದ ಹೆಣ್ಣು ಹಸುಗೂಸೊಂದು ಪತ್ತೆಯಾಗಿದೆ. ಆ ಮಗುವನ್ನು ಮಕ್ಕಳ ಸುರಕ್ಷಾ ತಂಡದವರು ರಕ್ಷಣೆ ಮಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ಹೆದ್ದಾರಿ ಪಕ್ಕದ ಮೋರಿ ಬಳಿ 3 ದಿನಗಳ ಹಸುಗೂಸು ಪತ್ತೆಯಾಗಿದೆ. ಈ ವಿಷಯವನ್ನು ಸಾರ್ವಜನಿಕರು ಮಕ್ಕಳ ಸುರಕ್ಷಾ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದಂತ ಮಕ್ಕಳ ಸುರಕ್ಷಾ ತಂಡದವರು, ಮಗುವನ್ನು ರಕ್ಷಿಸಿ, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅಲ್ಲದೇ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಅಂದ ಹಾಗೇ ಮಗು ಪತ್ತೆಯಾದ ಬಳಿಯಲ್ಲೇ ವಾಣಿ ವಿಲಾಸ ಆಸ್ಪತ್ರೆಗೆ ಸೇರಿದಂತ ಒಂದು ಚೀಟಿ ದೊರೆತಿದೆ. ಅದರಲ್ಲಿ ತಾಯಿಯ ಹೆಸರು ಸುಪ್ರೀತಾ, ಆನೆಕಲ್ ತಾಲೂಕಿನ ಬೆಸ್ತರ ಬೀದಿ ಎಂಬುದಾಗಿ ವಿಳಾಸ ಕೂಡ ದೊರೆತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ತಾಯಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.