ಬೆಂಗಳೂರುಸುವರ್ಣ ಗಿರಿ ಟೈಮ್ಸ್

ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಪಠ್ಯದಲ್ಲಿ ಸೇರಿಸುವಂತೆ NCERT ಸಮಿತಿ ಶಿಫಾರಸು

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳು ರಾಮಾಯಣ ಹಾಗೂ ಮಹಾಭಾರತವನ್ನು ಶಾಲಾ ಪಠ್ಯದಲ್ಲಿ ಕಲಿಯುವ ಸಾಧ್ಯತೆ ಇದೆ.

ಹೊಸ ಪಠ್ಯಕ್ರಮದ ಅನುಸಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ರಚಿಸಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ( NCERT) ಇದೀಗ ಮಹತ್ವದ ಶಿಫಾರಸು ಮಾಡಿದೆ. ಕಳೆದ ವರ್ಷ ಏಳು ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಗೆ ಈ ಸಮಿತಿ ಹಲವು ಶಿಫಾರಸು ನೀಡಿದೆ. ಸಮಿತಿ ಶಿಫಾರಸು ಮಾಡಿದ ಅಂಶಗಳನ್ನು 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಹಾಗೂ ಬೋಧನಾ ಕಲಿಕಾ ಸಾಮಾಗ್ರಿ ಸಮಿತಿ ಪರಿಶೀಲನೆ ನಡೆಸಿ ಪರಿಗಣಿಸಲಿದೆ.

ಶ್ರೀ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳನ್ನು ಪಠ್ಯದಲ್ಲಿ 3 ಸೇರಿಸುವ ಜೊತೆ ಮೌಲ್ಯಗಳನ್ನು ತಿಳಿಸುವ ಪ್ರಯತ್ನವಾಗಬೇಕು. ಮಕ್ಕಳ ಮೌಲ್ಯಯುತ ಜೀವನಕ್ಕೆ ಶ್ರೀ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳು ಅವಶ್ಯಕವಾಗಿದೆ ಎಂದು ಸಮಿತಿಯ ಮುಖ್ಯಸ್ಥ ಸಿಐ ಐಸಾಕ್ ಹೇಳಿದ್ದಾರೆ.

7 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳನ್ನು ಪಠ್ಯದಲ್ಲಿ ಸೇರಿಸುವಂತೆ ಸಮಿತಿ ಶಿಫಾರಸು ಮಾಡಿದೆ. ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ದೇಶಭಕ್ತಿ, ದೇಶದ ಬಗ್ಗೆ ಗೌರವ ಹಾಗೂ ಹೆಮ್ಮೆಯನ್ನು ಬೆಳೆಸುವಲ್ಲಿ ಈ ಮಹಾಕಾವ್ಯಗಳು ನೆರವಾಗಲಿದೆ.

Related Articles

Leave a Reply

Your email address will not be published. Required fields are marked *

Back to top button