ದಾವಣಗೆರೆಸುವರ್ಣ ಗಿರಿ ಟೈಮ್ಸ್

ಅಬಕಾರಿ DC, ಇನ್ಸ್ ಪೆಕ್ಟರ್, ಸಿಬ್ಬಂದಿ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಬಲೆಗೆ.

ದಾವಣಗೆರೆ: ಲಂಚಕ್ಕೆ ಕೈಯೊಡ್ಡಿದ್ದಾಗಲೇ ಅಬಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಅಬಕಾರಿ ಡಿಸಿ, ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮದ್ಯದಂಗಡಿಗೆ ಪರವಾನಿಗೆ ನೀಡಲು ಲಂಚ ಸ್ವೀಕರಿಸುತ್ತಿದ್ದ ದಾವಣಗೆರೆ ಅಬಕಾರಿ ಡಿಸಿ ಸ್ವಪ್ಪಾ ಹರಿಹರ ಅಬಕಾರಿ ಇನ್ಸ್ ಪೆಕ್ಟರ್ ಶೀಲಾ, ಕಚೇರಿ ಸಿಬ್ಬಂದಿಗಳಾದ ಹೆಚ್.ಎಂ ಅಶೋಕ್, ಶ್ರೀಶೈಲಾ ಲೋಕಾಯುಕ್ತ ಬಲೆಗೆ ಬಿದ್ದವರು.

ಮದ್ಯದಂಗಡಿಗೆ ಪರವಾನಗಿ ನೀಡಲು ಹರಿಹರ ಮೂಲದ ರಂಗನಾಥ್ ಎಂಬುವವರಿಂದ ಸಿಬ್ಬದಿ ಅಶೋಕ್ ಮೂಲಕ ಅಬಕಾರಿ ಡಿಸಿ ಸ್ವಪ್ನಾ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಅಬಕಾರಿ ಡಿಸಿ, ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button