ಚಿಕ್ಕೋಡಿ; ಸಾರ್ವಜನಿಕ ಆಸ್ಪತ್ರೆಗೆ ನೂತನ ಮುಖ್ಯ ವೈದ್ಯಾಧಿಕಾರಿ ಅಧಿಕಾರ ಸ್ವೀಕಾರ.
ಚಿಕ್ಕೋಡಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೂತನ ಮುಖ್ಯ ವೈದ್ಯಾಧಿಕಾರಿಗಳಾಗಿ, ತಜ್ಞ ವೈದ್ಯರಾದ ಡಾ. ಮಹೇಶ ನಾಗರಬೆಟ್ಟ ಸಾಹೇಬರು, ಅಧಿಕಾರ ವಹಿಸಿಕೊಂಡಿದ್ದು, ಕನ್ನಡ ಪರ ಹೋರಾಟಗಾರರಾದ ಸಂಜು ಬಡಿಗೇರ ಮತ್ತು ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ ಇವರು, ತಮ್ಮ ವೃಂದದ ಸದಸ್ಯರೊಂದಿಗೆ ಭೆಟ್ಟಿಯಾಗಿ, ಹೂ ಗುಚ್ಚು ನೀಡುವ ಮೂಲಕ ಸ್ವಾಗತ ಕೋರಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಜು ಬಡಿಗೇರ, ಈ ಆಸ್ಪತ್ರೆಯಲ್ಲಿ ಸರಿಯಾದ ಸೇವೆ ದೊರೆಯುತ್ತಿಲ್ಲ, ಬಡ ರೋಗಿಗಳಿಗೆ ಬೆಳಗಾವಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರವಾನಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ, ಇದನ್ನು ಬದಲಾಯಿಸಿ ತಮ್ಮ ಅಧಿಕಾರವಧಿಯಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ದೊರೆಯುವ ಕಾರ್ಯವಾಗಬೇಕು ಎಂದು ಸೂಚಿಸಿದರು.
ಚಂದ್ರಕಾಂತ ಹುಕ್ಕೇರಿ ಮಾತನಾಡಿ ಈ ಹಿಂದೆ ಕೇವಲ ಹಜರಿ ಭತ್ತೆಗಾಗಿ ಮಾತ್ರ ಕಾರ್ಯ ಮಾಡಿದ್ದಾರೆ, ಎಳ್ಳಷ್ಟೂ ಜವಾಬ್ದಾರಿ ಇಲ್ಲದೇ, ಬಡ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲ ಮಾಡುವ ಮೂಲಕ, ಒಂದನೇ ಸ್ಥಾನದಲ್ಲಿದ್ದ ಈ ಆಸ್ಪತ್ರೆಯನ್ನು ಮಕಾಡೆ ಮಲಗಿಸುವ ಕಾರ್ಯ ಮಾಡಿದ್ದಾರೆ, ತಮ್ಮ ಆಗಮನದ ನಂತರ ಜನರಿಗೆ ಉತ್ತಮ ಚಿಕಿತ್ಸೆ ಸಿಕ್ಕು ಜನ ಮೆಚ್ಚುಗೆಯ ಕಾರ್ಯವಾಗಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹೋರಾಟಗಾರರಾದ ನಕುಲ ಕಂಬಾರ, ರಫೀಕ್ ಪಠಾಣ, ಸಂಜಯ ಪಾಟೀಲ, ಪ್ರತಾಪ ಜತ್ರಾಟೆ, ಕುಮಾರ ಪಾಟೀಲ, ಸಂತೋಷ ಪೂಜಾರಿ, ಬಸವರಾಜ ಸಾಜನೆ ಹಾಗೂ ಅಸಂಖ್ಯಾತ ಕನ್ನಡ ಪರ ಹೋರಾಟಗಾರರು ಉಪಸ್ಥಿತರಿದ್ದರು.