ಕೂಡಲೇ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಇವರಿಗೆ ಮನವಿ ಸಲ್ಲಿಕೆ.

ಚಿಕ್ಕೋಡಿ : ಚಿಕ್ಕೋಡಿ ಜಿಲ್ಲೆಯಾಗಬೇಕೆಂದು 3 ದಶಕಗಳಿಂದ ಹೋರಾಟ ನಡೆದಿದೆ, ಕೂಡಲೇ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಇವರಿಗೆ ಮನವಿ ಸಲ್ಲಿಸಲಾಯಿತು.
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಸಚಿವ ಸತೀಶ ಜಾರಕಿಹೊಳಿ ಇವರಿಗೆ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ ಇವರು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಿದರು, ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ನಾನು ಚಿಕ್ಕೋಡಿ ಮತ್ತು ಗೋಕಾಕ ಎರಡನ್ನೂ ಜಿಲ್ಲೆ ಮಾಡಲು ತುಂಬಾ ಪ್ರಯತ್ನದಲ್ಲಿದ್ದೇನೆ, ಈ ವಿಷಯದ ಕುರಿತು ಈಗಾಗಲೇ ಸದನದಲ್ಲಿಯೂ ಮಾತನಾಡಿದ್ದೇನೆ, ಆದಷ್ಟು ಬೇಗ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ಜಿಲ್ಲೆಗಳನ್ನು ರಚನೆ ಮಾಡಲಾಗುವುದು ಎಂದು ಹೇಳಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ ಮಾತನಾಡಿ 3 ದಶಕಗಳ ನಮ್ಮ ಹೋರಾಟಕ್ಕೆ ಇಲ್ಲಿಯವರೆಗೆ ಸ್ಪಂದನೆ ಸಿಕ್ಕಿಲ್ಲಾ, ಎಲ್ಲ ಪಕ್ಷದವರು ಚುನಾವಣೆಯ ಮುಂಚೆ ಮಾತ್ರ ಭರವಶೆ ನೀಡಿರುತ್ತಾರೆ ನಂತರ ಮರೆತು ಬಿಡುತ್ತಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ನಾವು ತಮ್ಮ ಮೇಲೆ ಭರವಶೆ ಇಟ್ಟಿದ್ದೇವೆ, ತಾವು ನಮಗೆ ನೀಡಿರುವ ಭರವಶೆಗೆ ಬದ್ಧರಾಗಿ ಚಿಕ್ಕೋಡಿ ಜಿಲ್ಲೆಯಾಗಿ ಮಾಡಿ, ಚಿಕ್ಕೋಡಿ ಜಿಲ್ಲೆಯಾಗುವುದರಿಂದ ಎಲ್ಲರಿಗೂ ಹೆಚ್ಚಿನ ಅನುಕೂಲ ಆಗಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹೋರಾಟಗಾರರಾದ ನಕುಲ ಕಂಬಾರ, ರಫೀಕ್ ಪಠಾಣ, ಮಹಾವೀರ ಮೋಹಿತೆ, ಸಂಜಯ ಪಾಟೀಲ, ಜೀವನ ಮಾಂಜರೇಕರ, ರಾಜು ಕೋಟಗಿ, ಪ್ರತಾಪ ಜತ್ರಾಟೆ, ರವಿ ನಾಯಿಕ, ಮುಬಾರಕ ಡೋಂಗರೆ, ಬಸವರಾಜ ಸಾಜನೆ ಹಾಗೂ ಅಸಂಖ್ಯಾತ ಜಿಲ್ಲಾ ಹೋರಾಟಗಾರರು ಉಪಸ್ಥಿತರಿದ್ದರು.