ವಿಜಯನಗರಸುವರ್ಣ ಗಿರಿ ಟೈಮ್ಸ್

ಹೊಸಪೇಟೆ ಬಳಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲಿಯೇ ಏಳು ಜನರು ಸಾವು.

ವಿಜಯನಗರ: ದೇವಸ್ಥಾನಕ್ಕೆ ಹೋಗಿ‌ ಮನೆಗೆ ಬರುವಾಗ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು‌ ಜನರು ಸಾವನ್ನಪ್ಪಿದ ಘಟನೆ ಹೊಸಪೇಟೆ ಹೊರ ವಲಯದ ವ್ಯಾಸನಕೇರಿ ಬಳಿ ನಡೆದಿದೆ.

ಹೊಸಪೇಟೆ ಉಕ್ಕಡ ಕೇರಿ ನಿವಾಸಿ ಗೋಣಿ ಬಸಪ್ಪ ಕುಟುಂಬದವರ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬರುವಾಗ ಘಟನೆ ಅಪಘಾತ ನಡೆದಿದೆ.
ಎರಡು ಲಾರಿ ಮತ್ತು ಕ್ರೂಸರ್ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ ಘಟನೆಗೆ ಲಾರಿಯೊಂದರ ಎಕ್ಸಲ್ ಕಟ್ಟಾಗಿರೋದೇ ಕಾರಣ ಎನ್ನಲಾಗುತ್ತದೆ. ಸ್ಥಳದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟೊರೋದು ಒಂದೇಡೆಯಾದ್ರೇ ಮೃತ ದೇಹ ಹೊರ ತೆಗೆಯಲು‌ ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

ಇನ್ನೂ ಮೃತರನ್ನು ಉಮಾ(45) ಕೆಂಚವ್ವ(80) ಭಾಗ್ಯ( 32) ಅನಿಲ್ (30) ಗೋಣಿಬಸಪ್ಪ (65) ಯುವರಾಜ (4) ಭೀಮಲಿಂಗ (50) ಎಂದು ಗುರುತಿಸಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರೋ‌‌ ಇಬ್ಬರನ್ನು ಸೇರಿದಂತೆ ಮೃತ ದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ‌ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button