ಅಕ್ರಮ ಬಡಾವಣೆಗಳಿಗೆ ನೋಟೀಸ್ ಜಾರಿ ಮಾಡಿದ ಮುಖ್ಯಾಧಿಕಾರಿ ಸಂಜೀವ್ ಮಾಂಗ್ !?

ಬಿಗ್ ಬ್ರೇಕಿಂಗ್
ಬೆಳಗಾವಿ: ರಾಯಬಾಗ ಪಟ್ಟಣದ ಮುಖ್ಯಾಧಿಕಾರಿ ಸಂಜೀವ ಮಾಂಗ ಪಟ್ಟಣದ ವ್ಯಾಪ್ತಿಯಲ್ಲಿರುವ ಅಕ್ರಮ ಬಡಾವಣೆಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಈ ಕುರಿತು ಸುವರ್ಣ ಗಿರಿ ಟೈಮ್ಸ್ ಸುದ್ಧಿಯೊಂದನ್ನು ಮಾಡಿತ್ತು ಎಚ್ಚೆತ್ತ ಮುಖ್ಯಾಧಿಕಾರಿ ಸಂಜೀವ ಖಡಕ್ ಹೆಜ್ಜೆಯನ್ನು ಇಟ್ಟು ಒಟ್ಟು ಐದು ಅಕ್ರಮ ಬಡಾವಣೆಯ ಮಾಲೀಕರಿಗೆ ನೋಟೀಸ್ ತಗೆದಿದ್ದು ಪ್ರತಿ ಲಭ್ಯವಾಗಿದೆ.

ಆ ಐದು ಬಡಾವಣೆಯ ಮಾಲೀಕರ ಪಟ್ಟಿ ಲಭವಾಗಿದ್ದು ಆ ಪ್ರಕಾರ ಬಡಾವಣೆಯ ಮಾಲೀಕರಿಗೆ ೧) ಡಾಲರ್ಸ ಕಾಲಿನಿ, ೨) ವೈಭವ ನಗರ್, ೩) ಮಹಾಲಕ್ಷ್ಮಿ ಲೈ ಔಟ್ , ೪) ವಿಶ್ವೇಶ್ವರಯ್ಯ ಲೇ ಔಟ್ ೫) ಪಾಟೀಲ್ ನಗರ ೬) ಮಹಾಕಾಲಿ ಟೀಚರ್ಸ್ ಕಾಲಿನಿಯ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಬಡಾವಣೆಯ ಕಾಗದ ಪತ್ರಗಳನ್ನು ಹಾಜರು ಮಾಡಲು ನಿರ್ದೇಶನ ನೀಡಿದ್ದಾರೆ.
ಈ ಕುರಿತು ಮುಖ್ಯಾಧಿಕಾರಿ ಸಂಜೀವ ಮಾಂಗ ಪಟ್ಟಣದಲ್ಲಿ ದಪ್ತರದ ದಾಖಲೆಗಳಲ್ಲಿ ಲಭವಿಲ್ಲದ ಬಡಾವಣೆಗಳಿಗೆ ಬಡಾವಣೆಯ ಮಾಲೀಕರಿಗೆ ಎಲ್ಲಾ ಕಾಗದ ಪತ್ರಗಳನ್ನು ಹಾಜರು ಮಾಡಲು ನೋಟೀಸು ಜಾರಿ ಮಾಡಲಾಗಿದೆ ಎಂದರು.

ಈ ಕುರಿತು ಸಾಮಾಜಿಕ ಹೊರಾಟಗಾರ ಸುರೇಂದ್ರ ಉಗಾರೆ ಮುಖ್ಯಾಧಿಕಾರಿಗಳು ನೋಟಿಸು ಜಾರಿ ಮಾಡಿದ್ದನ್ನು ಸ್ವಾಗತಿಸಿದರಲ್ಲದೇ ಕೇವಲ ಬಡಾವಣೆಯ ಮಾಲೀಕರಿಗೆ ನೋಟೀಸು ಜಾರಿ ಮಾಡಿದರೆ ಸತ್ಯ ಗೊತ್ತಾಗಲ್ಲಾ ಮುಖ್ಯಾಧಿಕಾರಿಗಳು ಸ್ಥಾನಿಕ ಪರೀಶೀಲಣೆ ಮಾಡಿದರೆ ಬಡಾವಣೆಯಲ್ಲಿನ ಮಾಲೀಕರ ಗರದಿ- ಗಮ್ಮತ್ತು ಇನ್ನೂ ಗೊತ್ತಾಗಿತ್ತದೆ ಎಂದರು.
ಸುವರ್ಣ ಗಿರಿ ಟೈಮ್ಸ್ ಸತತ ಸುದ್ಧಿಯ ನಂತರ ಒಂದು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಖಡಕ್ ಹೆಜ್ಜೆ ಇಟ್ಟಿದೆ ಇನ್ನೂ ಇಂತಹ ಅಕ್ರಮ ಬಡಾವಣೆಗಳು ದಾಖಲಾತಿ ಇಲ್ಲದೇ ಪಟ್ಟಣ ಪಂಚಾಯತಿಯ ಎಂಟ್ರಿ ಆಗಿವೆ ಅವುಗಳಿಗೆ ಕೂಡಾ ನೋಟೀಸ್ ಜಾರಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.
