ಧಾರವಾಡಸುವರ್ಣ ಗಿರಿ ಟೈಮ್ಸ್
ಅಸಲಿ ಬಂಗಾರ ಅಡು ಇಟ್ಟವನಿಗೆ ನಕಲಿ ಬಂಗಾರ ಎಂದು ಕೇಸ್ ಹಾಕಿದ ಕೆನರಾ ಬ್ಯಾಂಕ: ನೊಂದ ರೈತ ಜನತಾ ದರ್ಶನದಲ್ಲಿ ತಣ್ಣ ಅಳಲು.
ಧಾರವಾಡ: ನವಲಗುಂದ ಕೆನರಾ ಬ್ಯಾಂಕ, ಗ್ರಾಹಕನಿಗೆ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ರೈತ ಈರಣ್ಣ ಅಂಗಡಿ ಬಂಗಾರ ಅಡವಿಟ್ಟು, 14 ಲಕ್ಷ 55 ಸಾವಿರ ರೂಪಾಯಿ ಸಾಲ ಪಡೆದಿದ್ದ. ಈರಣ್ಣ, ಬಂಗಾರ ಅಡುವಿಟ್ಟ ಸಂದರ್ಭದಲ್ಲಿ ಕೆನರಾ ಬ್ಯಾಂಕ ಸಿಬ್ಬಂದಿ, ಬಂಗಾರದ ಪರಿಶುದ್ಧಿಕರಣ ಮಾಡಿತ್ತು. ಬಂಗಾರ ಅಸಲಿ ಇದೆ ಅನ್ನೋದು ದೃಡೀಕರಣವಾದ ಮೇಲೆ ಸಾಲ ಕೊಟ್ಟಿತ್ತು.
ಆದರೆ, ನವಲಗುಂದದ ಕೆನರಾ ಬ್ಯಾಂಕ ಇದೀಗ, 7 ತಿಂಗಳ ನಂತರ ಅಡವಿಟ್ಟ ಬಂಗಾರ ನಕಲಿ ಎಂದು ಹೇಳಿ ಶಾನವಾಡ ಗ್ರಾಮದ ಈರಣ್ಣ ಅಂಗಡಿ ಎಂಬ ರೈತನ ಮೇಲೆ, ಕೇಸ್ ದಾಖಲಿಸಿದೆ.
ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಬ್ಯಾಂಕ ಸಿಬ್ಬಂದಿ ವಂಚನೆ ಪ್ರಕರಣ ಧಾಖಲು ಮಾಡಿದ್ದರಿಂದ ನೊಂದ ರೈತ ಜನತಾ ದರ್ಶನದಲ್ಲಿ ತಣ್ಣ ಅಳಲನ್ನು ತೋಡಿಕೊಂಡಿದ್ದಾನೆ.