ಬೆಳಗಾವಿ MP ಟಿಕೇಟ್ MLC ಟಿಕೇಟ್ ತರಹ್ ಸೊಲ್ಡ್ ಔಟ್ ಆಗುತ್ತಾ ? ಹಾಗಾದರೆ ಬೆಳಗಾವಿ ಎಂ.ಪಿ.ಟಿಕೇಟ್ ಯಾರಿಗೆ ?

ಬೆಳಗಾವಿ: ಜಿಲ್ಲೆಯ ರಾಜಕೀಯ ಬೇರೆ ಜಿಲ್ಲೆಗಳಿಗಿಂತಲೂ ವಿಭಿನ್ನವಾಗಿದೆ. ಬೆಂಗಳೂರಿನಲ್ಲಿ 28 MLA ಗಳಿದ್ದರೂ ಬೆಳಗಾವಿಯಲ್ಲಿ 18 MLA ಗಳ ಧರ್ಪ ಮಾತ್ರ ಡಿಪರೆಂಟ್ ಇದೆ. ಹಾಗಾಗಿ ಬೆಳಗಾವಿ MP ಟಿಕೇಟ್ ಸೊಲ್ಡ್ ಔಟ್ ಆಗುತ್ತಾ ಎಂಬ ಚರ್ಚೆಗಳು ಸುರು ಆಗಿವೆ.
ಇತ್ತೀಚಿಗೆ ಬೆಳಗಾವಿಯಲ್ಲಿ ನಡೆಯಬೇಕಾಗಿದ್ದ ಗೃಹ’ಲಕ್ಷ್ಮೀ’ ಕಾರ್ಯಕ್ರಮ ಮೈಸೂರಿಗೆ ಶಿಪ್ಟ್ ಆಗಿದ್ದರ ಹಿಂದೆ ಗೃಹ’ಲಕ್ಷ್ಮೀ’ ಯ ಕಾರ್ಯಕ್ರಮದ ಪಬ್ಲಿಸಿಟಿ ಬೇರೆ ಯಾರಿಗೋ ಸಿಗುತ್ತೊ ಎಂದು ತಿಳಿದು ಸಿದ್ದು ಸರಕಾರ ಒಮ್ಮಿಂದೊಮ್ಮಿಗೆ ಮೈಸೂರಿಗೆ ಶಿಪ್ಟ್ ಮಾಡಿಬಿಟ್ತು.
ಆದರೂ (ಗೃಹ)ಲಕ್ಷ್ಮೀಯ ಪಬ್ಲಿಸಿಟಿ ಯಾರಿಗೆ ಸೇರಬೇಕೋ ಅವರಿಗೆ ಸೇರಿತು. ಹೀಗಾಗಿ ಬೆಳಗಾವಿ ಎಂ ಪಿ ಟಿಕೇಟ್ ಸಧ್ಯ ಮಾರಾಟದ ರೂಪಕ್ಕೆ ತಿರುಗುವ ಲಕ್ಷಣಗಳು ಕಾಣುತ್ತಿವೆ.
ಅದಕ್ಕಿಂತ ಮೊದಲು ಕರ್ನಾಟಕ ಕಾಂಗ್ರೆಸ್ MLC ಟಿಕೇಟ್ ಹೇಗೆ ಮಾರಾಟ್ ಮಾಡ್ತು ಅನ್ನೊದು ತಿಳಕೋಬೇಕು ಅಲ್ವಾ ? ಅಂದು ಬೆಳಗಾವಿಯಲ್ಲಿ ಕೈ ಕಲಿಗಳು ಹೆಚ್ಚಾಗಿದ್ದರಿಂದ ಕೈ ಪಡಿಯು ಮಾರಾಟಕ್ಕೆ ಇಟ್ತು ಅಂದರೆ ಪಾರ್ಟಿ ಫಂಡ್ ಹೆಚ್ಚು ಯಾರು ಕೊಡ್ತಾರೆ ಅವರಿಗೆ ಟಿಕೇಟ್ ಅಂದ್ರು ಅವಾಗ ಜಿಲ್ಲೆಯ ಮೀಸೆಯ ಮಾಂವ ಮೊದಲು ಮೀಸೆ ಮೇಲೆ ಕೈಯಾಡಿಸುತ್ತಾ ಮಗನ ಜೊತೆ ಜಾಗಾ ಖಾಲಿ ಮಾಡಿದ್ತು. ನಂತ್ರ ಇನ್ನೋಬ್ಬ ಹುರಿಯಾಳು ತಂದೆಯ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ದಾಡಿದಾದ ದಾಡಿಯ ಮೇಲೆ ಕೈ ಅಡಿಸುತ್ತಾ ಜಾಗಾ ಖಾಲಿ ಮಾಡಿದರು. ಕೊನೆಗೆ ಮತ್ತೊಬ್ಬರು ಸವಾಲು ಹಾಕುವ ಸಹೋದರರು ಜಾಗಾ ಖಾಲಿ ಮಾಡಿದ್ರು ಎಲ್ಲರೂ ಹೋದ ಮೇಲೆ ಲಕ್ಷ್ಮೀ ಯಾರಿಗೆ ಒಲೀಬೇಕೋ ಅವರಿಗೆ ಒಲೆದುಬಿಟ್ಳು.
ಅದೇ ರೀತಿ ಜಿಲ್ಲೆಯಲ್ಲಿ ಎಂ.ಪಿ ಟಿಕೇಟ್ ಕೂಡಾ ಹಾಗೇ ಆಗುತ್ತಾ ಎನ್ನುವದರಲ್ಲಿ ಸಂದೇಹ ಇಲ್ಲಾ ಅನ್ನುತ್ತಿವೆ ಕೈ ಚಿಂತಕರು. ಸಹೋದರರ ಸವಾಲು ಟಿಕೇಟ್ ಪಡೆಯಲು ಎಷ್ಟು ವರ್ಕೌಟ್ ಆಗುತ್ತೆ ಎನ್ನುವದು ಇನ್ನೂ ಉತ್ತರ ಸಿಕ್ಕಿಲ್ಲಾ. ಹಾಗೊಮ್ಮೆ ಬೆಳಗಾವಿ ಟಿಕೇಟ್ ಸೊಲ್ಡ್ ಔಟ್ ಆದರೆ ಬೆಳಗಾವಿ ಟಿಕೇಟ್ ಯಾರಿಗೆ ಅನ್ನೊದು ಗೊತ್ತಾಗಿರಬೇಕು ?
ಮತ್ತೇ ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ರಾಜಕೀಯ ಗಾಸಿಪ್ಪನೊಂದಿಗೆ.