ದೆಹಲಿಸುವರ್ಣ ಗಿರಿ ಟೈಮ್ಸ್
”ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕಮಿಷನ್: ಬಿಸಿಐ ದಂಡ ಸಮರ್ಥಿಸಿದ ಸುಪ್ರೀಂ ಕೋರ್ಟ್.
ದೆಹಲಿ: ವಕೀಲರಾಗಿದ್ದುಕೊಂಡು ರೀಯಲ್ ಎಸ್ಟೇಟ್ ಏಜೆಂಟರಾದರೆ ಅದು ವೃತ್ತಿ ದುರ್ನಡತೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಕೃತ್ಯದಲ್ಲಿ ತೊಡಗಿದ್ದ ವಕೀಲರಿಗೆ ದಂಡ ವಿಧಿಸಿ ವಕೀಲರನ್ನು ಐದು ವರ್ಷಗಳ ಕಾಲ ವೃತ್ತಿ ನಡೆಸದಂತೆ ನಿಷೇಧಿಸಿದ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಕ್ರಮವನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದೆ.
ನ್ಯಾ. ಅಭಯ ಶ್ರೀನಿವಾಸ್ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ವಕೀಲರೊಬ್ಬರು ತಮ್ಮ ಕಕ್ಷಿದಾರರಿಗೆ ಜನರಲ್ ಪವರ್ ಆಫ್ ಅಟಾರ್ನಿ ಪಡೆದುಕೊಂಡು ಆಸ್ತಿಯ ಮಾರಾಟ ನಡೆಸಿದ್ದರು. ಮತ್ತು ಈ ಮಾರಾಟದಿಂದ ಬಂದ ಹಣದ ಶೇ. 2ರಷ್ಟು ಮೊತ್ತವನ್ನು ಕಮಿಷನ್ ಆಗಿ ಪಡೆದು ಕೊಂಡಿದ್ದರು.
ಈ ಬಗ್ಗೆ ವಕೀಲರ ಪರಿಷತ್ತು ನಡೆಸಿದ ವಿಚಾರಣೆ ವೇಳೆ ತಪ್ರೊಪ್ಪಿಕೊಂಡಿದ್ದ ಆರೋಪಿ ವಕೀಲರು ತಾವು ನ್ಯಾಯವಾದಿಯಾಗಿ ಈ ಕೃತ್ಯ ಎಸಗಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕಮಿಷನ್ ಪಡೆದಿರುವುದಾಗಿ ಹೇಳಿದ್ದಾರೆ.