ಕೋವಿಡ್- 19 ಸಮಯದಲ್ಲಿಯೂ ‘ಕಾಂಡೊಮ್’ಗಳು ಭರಪೂರ್ ಮಾರಾಟ್ !!
ಬೆಳಗಾವಿ: ಕರೋಣಾ ಸಮಯದಲ್ಲಿ ದೇಶದ ಜನ ನೆಮ್ಮದಿಯನ್ನು ಕಳೆದುಕೊಂಡಿದ್ದರೆ ಎಂದರೆ ಅದಕ್ಕೇ ಉತ್ತರ ಹೌದು ಎನ್ನುತ್ತಾರೆ. ಆದರೆ ಕಾಂಡೋಮಗಳ ಮಾರಾಟ್ ನೋಡಿದರೆ ಜನ ‘ಫುಲ್ ಜೋಷ’ನಲ್ಲಿದ್ದರು ಎಂಬುದನ್ನು ಕೇಳಿ ಪ್ರತಿಯೋಬ್ಬರು ಶಾಖ್ ಆಗುತ್ತಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾದಲ್ಲಿರುವ (ಹೆಚ್ಚ ಎಲ್ ಎಲ್) ಹಿಂದೂಸ್ಥಾನ್ ಲೈಫ್ ಕೇರ್ ಲಿಮಿಟೆಡ್. ಕಣಗಲಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದೆ ಹಾಗೂ ಇದು ರಾಜ್ಯದ ಏಕೈಕ ಕಾಂಡೋಮ್ ಪ್ಯಾಕ್ಟರಿ ಆಗಿದೆ. ಈ ಪ್ಯಾಕ್ಟರಿಯು ಅಚ್ಚರಿ ಮೂಡಿಸುವಂತಹ ಅಂಕಿ ಅಂಶಗಳನ್ನು ಮಾಹಿತಿ ಹಕ್ಕಿನಲ್ಲಿ ಬೆಳಗಾವಿಯ ವಕೀಲ ಸುರೇಂದ್ರ ಉಗಾರೆ ಇವರಿಗೆ ಕೇರಳದ ತಿರುವನಂತಪೂರಮದಲ್ಲಿರುವ ಹೆಲ್.ಎಲ್. ಎಲ್. ಭವನವು ಕಾರ್ಯಾಲಯವು ಮಾಹಿತಿಯನ್ನು ನೀಡಿದೆ.
ನೀಡಿರುವ ಮಾಹಿತಿ ಪ್ರಕಾರ ಸನ್ 2016/17 ರಲ್ಲಿ 186 ಕೋ ರೂ ಕೇಂದ್ರ ಸರಕಾರದಿಂದ 146 ಕೋ ರೂ ಖಾಸಗಿ/ರಾಜ್ಯದವರಿಂದ ಹಾಗೂ 77.68 ಕೋ ರೂ ರಪ್ತು ವ್ಯವಹಾರ ಮಾಡಿತ್ತು. ಆ ವ್ಯವಹಾರ ಪ್ರತಿ ವರ್ಷ ಕಮ್ಮಿ ಆಗುತ್ತಾ ಬಂದಿತ್ತು. ಸನ್ 2019/20 ರಲ್ಲಿ 103 ಕೋ ರೂ ಕೇಂದ್ರ ಸರಕಾರದಿಂದ, 23.73 ಕೋ ರೂ ಖಾಸಗಿ/ರಾಜ್ಯದವರಿಂದ ಹಾಗೂ 92.34 ಕೋ ರೂ ರಪ್ತು ವ್ಯವಹಾರ ಮಾಡಿತ್ತು. ಅದೇ ರೀತಿ ಸನ್ 2020/21 ರಲ್ಲಿ 146.42 ಕೋ ರೂ ಕೇಂದ್ರ ಸರಕಾರದಿಂದ, 23.15 ಕೋ ರೂ ಖಾಸಗಿ/ರಾಜ್ಯದವರಿಂದ ಹಾಗೂ 60.16 ಕೋ ರೂ ರಪ್ತು ವ್ಯವಹಾರ ಮಾಡಿತ್ತು.
ಅಂದರೆ ಕೋವಿಡ್ -19 ರ ಸನ್ 2020/21 ರಲ್ಲಿ ಕೇಂದ್ರ ಸರಕಾರದಿಂದ ಹೆಚ್ಚಿಗೆ ಅಂದರೆ 43 ಕೋ ರೂ ವ್ಯವಹಾರ ಮಾಡಿದೆ. ಖಾಸಗಿ ಅಥವಾ ರಾಜ್ಯ ಸರಕಾರಗಳಿಗೆ ರೂ 23.73 ದಿಂದ 25.15 ಕೋ ರೂ ಏರಿದೆ. ಅದೇ ರೀತಿ. ರಪ್ತು ವ್ಯವಹಾರದಲ್ಲಿ 63.05 ಕೋ ರೂ ದಿಂದ 92.34 ರೂ ಗಳಿಗೆ ಏರಿದೆ. ಮುಂದುವರೆದು ಹಿಂದುಸ್ತಾನ ಲೈಫ್ ಕೇರ್ ಲಿಮಿಟೆಡ್ ಕಂಪನಿ ಮಾಹಿತಿದಾರರಿಗೆ ಅತೃಪ್ತಿಯನ್ನು ಹೊಂದಿದಲ್ಲಿ ಕಂಪನಿ ಸೆಕ್ರೆಟರಿ ಹೆಚ್ ಎಲ್ ಎಲ್ ಭವನ್ ತಿರುವಂತನಪೂರಮ್ ಇವರಲ್ಲಿ ಮೇಲ್ಮಣ ಅರ್ಜಿ ಸಲ್ಲಿಸಿ ಫುಲ್- ಮಾಹಿತಿಯನ್ನು ಪಡೆಯಲು ಹೇಳಿದೆ.
ಸಮಾಜ ಚಿಂತಕರು ಕೋವಿಡ್ 19 ರಲ್ಲಿ ಹೆಚ್ಚು ಮಹಿಳೆಯರು ಗರ್ಭಿಣಿ ಆಗಿದ್ದಾರೆಂದು ವಿಷಯವನ್ನು ಒತ್ತಿ ಒತ್ತಿ ಹೇಳಿದ್ದರು. ಅದೇ ರೀತಿ ಮಹಿಳೆಯರು ಗರ್ಭಿಣಿ ಆದ ಬಗ್ಗೆ ಅಂಕಿ ಅಂಶಗಳನ್ನು ಪ್ರಕಟ ಮಾಡಿತ್ತು. ಜನಸಂಖ್ಯೆ ಸ್ಪೋಟ್ ಅಂತಾ ವರ್ಣಿಸಿದ್ದರೂ ಕೂಡಾ ಇಷ್ಟೊಂದು ವ್ಯವಹಾರನ್ನು ಬೆಳಗಾವಿಯ ಹಿಂದೂಸ್ತಾನ ಲೈಫ್ ಕೇರ್ ಲಿಮಿಟೆಡ್ ( ಪ್ಯಾಕ್ಟರಿಯು ) ವ್ಯವಹಾರ ಮಾಡಿದೆ ಎಂಬುದು ಮಾತ್ರ ಸತ್ಯ.