ಬೆಳಗಾವಿ ಪ್ರವಾಸೋಧ್ಯಮ ಇಲಾಖೆಯ ಕರ್ಮ ಕಾಂಡ ಭಾಗ-2. // ಸರಕಾರದ ಆದೀನ ಕಾರ್ಯದರ್ಶಿಯವರ ಆದೇಶವನ್ನು ಮೀರಿ ಪ್ರಭಾರ ಹುದ್ದೆಯ ನೇಮಕ ಮಾಡಿದ ಬೆಳಗಾವಿ ಡಿ.ಸಿ.
ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇವರು ಸರಕಾರದ ಆದೀನ ಕಾರ್ಯದರ್ಶಿಯ ಆದೇಶವನ್ನು ಮೀರಿ ಪ್ರವಾಸೋಧ್ಯಮ ಇಲಾಖೆಗೆ ಜಗದೀಶ ಪಾಟೀಲರಿಗೆ ಸಹಾಯಕ ನಿರ್ದೇಶಕರ ಹುದ್ಧೆಯನ್ನು ದಯಾಪಾಲಿಸಿದ್ದು ಬೆಳಕಿಗೆ ಬಂದಿದೆ.
ಕಳೆದ ವಾರ ನಿಯಮ ಮೀರಿ ಪ್ರವಾಸೋಧ್ಯಮ ಇಲಾಖೆಯ ಪ್ರಬಾರ ಹುದ್ದೆಯನ್ನು ದಯಪಾಲಿಸಿದ ಜಿಲ್ಲಾಧಿಕಾರಿ ಎಂದು ಸುದ್ಧಿಯನ್ನು ಪ್ರಸಾರ ಮಾಡಿತ್ತು. ಈಗ ಪ್ರಭಾರ ಹುದ್ದೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಬೆಳಗಾವಿ ಜಿಲ್ಲಾಧಿಕಾರಿಗಳು, ಸರಕಾರದ ಆದೀನ ಕಾರ್ಯದರ್ಶಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ವಿಮಲಾಕ್ಷಿ ಬಿ ಇವರು 25/07/2022 ರಂದು ಒಂದು ಆದೇಶ ಮಾಡಿ ಪ್ರಭಾರ ಅಧಿಕಾರಿ ಜಗದೀಶ ಪಾಟೀಲರ ಕಾರ್ಯವೈಖರಯ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ಮಾತ್ರು ಇಲಾಖೆಯಾದ ಕಾರ್ಮಿಕ ಇಲಾಖೆಗೆ ಹಿಂದುರುಗಿಸುವ ಆದೇಶವಾಗಿತ್ತು.
ಇದೆಲ್ಲಾ ಆದೇಶ ಇರುವಾಗ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲರು ಕಾರ್ಮಿಕ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಆಗಿರುವ ಜಗದೀಶ ಪಾಟೀಲರಿಗೆ ನಿಯಮ ಮೀರಿ ಪ್ರವಾಸೋಧ್ಯಮ ಇಲಾಖೆಯ ಉಪ ನಿರ್ದೇಶಕರ ಹುದ್ಧೆಯ ಪ್ರಭಾರವನ್ನು ದಯಾಪಾಲಿಸಿದ್ದಾರೆ.
ಆದರೆ, ಜಿಲ್ಲಾಧಿಕಾರಿಗಳ ನಿಯಮ ಬಾಹೀರ ಆದೇಶವು ನೌಕರರ ವಲಯದಲ್ಲೇ ದೊಡ್ಡ ಬಿಸಿ-ಬಿಸಿ ಚರ್ಚೆ ಆಗ್ತಾ ಇದೆ. ಆದ್ರೆ ಜಿಲ್ಲಾಧಿಕಾರಿ ನಿತೇಶ ಪಾಟೀಲರು ಈಗ ತಮ್ಮ ಆದೇಶವನ್ನು ಹಿಂತೆಗೆದುಕೊಳ್ಳುತ್ತಾರಾ ಅಥವಾ ಪ್ರವಾಸೊಧ್ಯಮ ಇಲಾಖೆ ನೇರವಾಗಿ ಅಖಡಾಗೆ ಇಳಿದು ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದು ಮಾಡುತ್ತಾ ಎಂಬುದು ಕಾದು ನೋಡಬೇಕು.