ವಕೀಲರ ಜೊತೆ ಅಸಭ್ಯ ವರ್ತನೆ: ಚಿಕ್ಕೋಡಿ ಎ ಸಿ ವಿರೂದ್ದ ಕ್ರಮಕ್ಕಾಗಿ ಪ್ರತಿಭಟನೆ.
ಬೆಳಗಾವಿ: ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ರಾಯಬಾಗದ ವಕೀಲರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಖಂಡಿಸಿ ರಾಯಬಾಗದಲ್ಲಿ ವಕೀಲರು ಪ್ರತಿಭಟನೆ ಮಾಡಿ ಕ್ರಮ ತಗೆದುಕೊಳ್ಳಲು ಸರಕಾರಕ್ಕೆ ಮನವಿ ಮಾಡಿದರು.
ಚಿಕ್ಕೋಡಿಯ ಭಾರತೀಯ ಆಡಳಿತ ಸೇವೆಯ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ನಿನ್ನೆಯ ಪ್ರಕರಣ ಒಂದಲ್ಲಿ ರಾಯಬಾಗದ ವಕೀಲರಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ವಕೀಲರನ್ನು ಬಂದಿಸಲು ಮುಂದಾದಾಗ ಅವರ ಜೊತೆ ಇದ್ದ ಇನ್ನೊಬ್ಬ ಸಹ ವಕೀಲರು ಕೂಡಾ ಎ ಸಿ ವಿರೂದ್ದ ಪ್ರತಿಭಟನೆ ಮಾಡಿ ವಿರೊದ ಅವರ ವರ್ತನೆಯನ್ನು ಸ್ಥಳದಲ್ಲೇ ಖಂಡಿಸಿದ್ದರು.
ಇಂದು ಚಿಕ್ಕೋಡಿ ಎ.ಸಿ. ಮಾಧವ ಗಿತ್ತೆಯವರ ಮೇಲೆ ಕ್ರಮ ತಗೋಬೇಕು ಎಂದು ರಾಯಬಾಗದ ಶಾಹು ಸರ್ಕಲದಲ್ಲಿ (ಜೆಂಡಾ ಕಟ್ಟಿ) ಬಳಿ ಪ್ರತಿಭಟನೆ ಮಾಡಿ ರಾಯಬಾಗ ತಹಶಿಲ್ದಾರ ಮುಖಾಂತರ ಸರಕಾರಕ್ಕೆ ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಮುಬಾರಕ್ ಚಿಂಚಲೀಕರ್, ಗುಂಡೋಪಂಥ ಕುಲಕರ್ಣಿ, ರಾಜು ಗೇಣನ್ನವರ, ಜಿ ಎಸ್ ಖಿಚಡೆ, ಎ ಎಮ್ ಗೆಜ್ಜಿ, ಬಿ ಎನ್ ಬಂಡಗಾರ್, ರ್ಶ್ರೀಮತಿ ರಾಜೇಶ್ರೀ ಪವಾರ್ ಹಾಗೂ ಇತರ ವಕೀಲರು ಹಾಜರು ಇದ್ದರು.