ಧಾರವಾಡಸುವರ್ಣ ಗಿರಿ ಟೈಮ್ಸ್
ಬಿಜೆಪಿದಿಂದ 16-18 ಶಾಸಕರು ಕಾಂಗ್ರೆಸ್ ಗೆ; ಶಾಸಕ ಎನ್.ಹೆಚ್. ಕೋನರೆಡ್ಡಿ.

ಹುಬ್ಬಳ್ಳಿ: ಆಪರೇಷನ್ ಹಸ್ತ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಕಾಂಗ್ರೆಸ್ ಶಾಸಕ ಎನ್.ಹೆಚ್.ಕೋನರೆಡ್ಡಿ 16 ರಿಂದ 18 ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಅಚ್ಚರಿಯ ಹೇಳಿಕೆಯನ್ನು ಹೊರ ಬಿಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋನರೆಡ್ಡಿ, ಕಾಂಗ್ರೆಸ್ ಗೆ ಬರುವವರ ಪಟ್ಟಿ ಮಾಡಿದ್ದಾರೆ. ಹೈಕಮಾಂಡ ಮಟ್ಟದ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.
ಶಂಕರ ಪಾಟೀಲ ಮುನೇನಕೊಪ್ಪ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. 16-18 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಅದೇ ರೀತಿ ಪ್ರಹ್ಲಾದ್ ಜೋಶಿ ಅವರು ಕೂಡಾ ಕಾಂಗ್ರೆಸ್ ಗೆ ಬಂದ್ರೆ ಬೇಡ ಅನ್ನಲ್ಲ ಎಂದು ಜೋಶಿ ಅವರನ್ನು ಕೂಡಾ ತಮ್ಮ ಕೈ ಪಕ್ಷಕ್ಕೆ ಆಹ್ವಾನಿಸಿದ್ದಾರೆ.