ಬೆಳಗಾವಿಸುವರ್ಣ ಗಿರಿ ಟೈಮ್ಸ್
ವಕೀಲ ವೃತ್ತಿ ನಿಷೇದದ ಆದೇಶಕ್ಕೆ ತಡೆ ನೀಡಿದ ದೇಹಲಿಯ ಬಾರ ಕೌನ್ಸಿಲ.
ಬೆಳಗಾವಿ: ಬೆಳಗಾವಿ ವಕೀಲ ಮತ್ತು ಮಾಜಿ ಅಧ್ಯಕ್ಷ ಪ್ರಭು ಯತ್ನಟ್ಟಿಯವರನ್ನು ವಕೀಲ ವೃತ್ತಿ ಮಾಡದಂತೆ ಶಾಸ್ವತ ನಿಷೇದ ಮಾಡಿದ ಆದೇಶಕ್ಕೆ ದೇಹಲಿ ಬಾರ್ ಕೌನ್ಸಿಲ್ ಆದೇಶ ನೀಡಿದೆ.
ಕಳೆದ ತಿಂಗಳು ಬೆಂಗಳೂರಿನ ವಕೀಲರ ಪರಿಷತ್ತು ಯತ್ನಟ್ಟಿಯವರನ್ನು ವಕೀಲವೃತ್ತಿ ಮಾಡದಂತೆ ಶಾಶ್ವತವಾಗಿ ನಿಷೇಧದ ಆದೇಶ ಮಾಡಿತ್ತು. ಈ ಕುರಿತು ವಕೀಲ ಪ್ರಭು ಯತ್ನಟ್ಟಿಯವರು ದೇಹಲಿಯ ಬಾರ್ ಕೌನ್ಸಿಲನ ಕದ ತಟ್ಟಿದ್ದರು. ಇಂದು ನಿಷೇದದ ಪ್ರಕರಣವನ್ನು ಆಲಿಸಿದ ಕೌನ್ಸಿಲದ ಚೇರಮನ್ನರು ಬೆಂಗಳೂರಿನ ವಕೀಲರ ಪರಿಷತ್ತಿನ ಆದೇಶಕ್ಕೆ ಬ್ರೆಕ್ ನೀಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಪ್ರಭು ಯತ್ನಟ್ಟಿ ಇವರ ಸ್ನೇಹಿತರು ಪಟಾಕಿ ಹಚ್ಚಿ ಸಂಬ್ರಮಿಸಿದರು. ಈ ಕುರಿತು ಹಿರಿಯ ವಕೀಲ ಮೋಹನ ಮಾವಿನಕಟ್ಟಿ ಯವರು ಬೆಂಗಳೂರಿನ ಆದೇಶಕ್ಕೆ ಬ್ರೆಕ್ ನೀಡಿದ್ದು ಖುಷಿ ನೀಡಿದೆ ಎಂದಿದ್ದರಲ್ಲದೇ ದೂದ್ ಕಾ ದೂದ್ ಔರ್ ಪಾನಿ ಕಾ ಪಾನಿ ಎಂಬುದ ಸತ್ಯದ ಮಾತು ಎಂದು ಹೇಳಿದರು.