ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ರೂ.2 ಕೋಟಿ ಗೂ ಹೆಚ್ಚು ರೂ.ಗಳ ಕಾಮಾಗಾರಿಯಲ್ಲಿ ಗೋಲ್ ಮಾಲ್ ? ತನಿಖೆಗೆ ಒತ್ತಾಯ.
ಬೆಳಗಾವಿ: ಜಿಲ್ಲೆಯ ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಒಟ್ಟು ರೂ. 2 ಕೋಟಿ ಅಧಿಕ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಅಧಿಕಾರಿಗಳ ಮೇಲೆ ಕ್ರಮ ತಗೋಬೇಕು ಎಂದು ವಕೀಲ ಸುರೇಂದ್ರ ಉಗಾರೆ ಇವರು ಬೆಳಗಾವಿಯ ಯೋಜನಾ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಪಟ್ಟಣ ಪಂಚಾಯತಿಯಲ್ಲಿ ಸನ್ 2018-19 ರಿಂದ 2021-22 ರ ಸಾಲಿನಲ್ಲಿ ಒಟ್ಟು 2 ಕೋಟಿ ರೂ. ಅಕ್ರಮ ನಡೆದಿದೆ ಎಂದು ಲೆಕ್ಕಪರಿಶೋಧಕರು ಪತ್ತೇ ಹಚ್ಚಿದ್ದಾರೆ. ಒಟ್ಟು 8 ಖಂಡಿಕೆಗಳಲ್ಲಿ ಉಲ್ಲೇಖಿಸಿದ್ದು ಕಾನೂನಿಗೆ ತದ್ವಿರುದ್ಧವಾಗಿ ಪ್ರತಿಯೊಂದನ್ನು ಸಂದಾಯ ಮಾಡಿದ್ದಾರೆಂದು ಉಲ್ಲೇಖಿಸಲಾಗಿದೆ. ಅಪೂರ್ಣಗೊಂಡ ಕಾಮಗಾರಿಗೆ ರೂ 41,29,761=00 ಗಳನ್ನು, ಕಾಮಗಾರಿಗಳನ್ನು ವಿಭಜಿಸಿ ಅನುಮೋಧನೆ ಪಡೆಯದೇ ಬಿಡುಗಡೆಯಾದ ಹಣ ರೂ 14,93,022=00 ಗಳನ್ನು, ರದ್ದು ಪಡಿಸಿದ ಕಾಮಗಾರಿಗೆ ರೂ. 11,87,891=00 ಗಳನ್ನು, ಒಂದೇ ಕಾಮಗಾರಿಯನ್ನು ವಿಭಜಿಸಿ ಸಂದಾಯ ಮಾಡಿದ ಹಣ ರೂ 48,72,999=00 ಗಳನ್ನು, ಮೂರು ಖಂಡಿಕೆಗಳಲ್ಲಿ ಒಂದೇ ಸ್ವರೂಪದ ಕಾಮಗಾರಿಯನ್ನು ವಿಭಜಸಿ ಸಂದಾಯ ಮಾಡಿದ ರೂ. 30,00,000=00 +25,00,000=00+25, ಒಟ್ಟು ರೂ 1,10,00,000=00 ಗಳನ್ನು ಹಾಗೂ ಕಾಮಗಾರಿಯ ಅಳತೆ ಪುನರ್ ಪರೀಶೀಲದೇ ಇರುವ ಮೊತ್ತ ರೂ 12,073,05=00 ಗಳನ್ನು ಹೀಗೆ ಒಟ್ಟು ರೂ 2ಕೊ,88ಲಕ್ಷ, 3673 ರೂ ಗಳ ಕಾಮಗಾರಿಗಳ ಸಂದಾಯಮಾಡಲಾಗಿದೆ ಎಂದು ಲೆಕ್ಕಪ್ರಿಶೋಧಕರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಯನ್ನು ಸ್ವೀಕರಿಸಿದ ಬೆಳಗಾವಿಯ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಇವರು ಅಕ್ರಮಕ್ಕೆ ಸಂಬಂದಿಸಿದಂತೆ ತನಿಖೆ ಮಾಡಲು ಒಂದು ತಂಡವನ್ನು ರಚನಾಮಾಡಿ ಕ್ರಮ ತಗೆದುಕೊಳ್ಳುವದಾಗಿ ಹೇಳಿದ್ದಾರೆ.