suvarna giri timesದಾವಣಗೆರೆ

“ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ.

ದಾವಣಗೆರೆ: ನಗರ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಬಳಿಯ ಜಿಎಂಐಟಿ ಹಿಂಭಾಗದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಿದ ಘಟನೆ ಶನಿವಾರ ನಡೆದಿದೆ.

ಧಾರವಾಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಮಧ್ಯಾಹ್ನ 3.30 ರಿಂದ 4 ಗಂಟೆ ಸುಮಾರಿಗೆ ಕಲ್ಲು ತೂರಿದ್ದು ಕಿಟಕಿ ಗಾಜಿಗೆ ಹಾನಿಯಾಗಿದೆ, ಹಾಗೂ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ, ಹಾಗೂ ರೈಲ್ವೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಂದೇ ಭಾರತ್ ರೈಲು ಬೆಂಗಳೂರು – ಧಾರವಾಡ ಸೆಮಿ ಹೈಸ್ಪೀಡ್ ಎಕ್ಸ್ ಪ್ರೆಸ್ ರೈಲು ಜೂನ್ 27 ರಿಂದ ಸಂಚಾರ ಆರಂಭಿಸಿದೆ.

Related Articles

Leave a Reply

Your email address will not be published. Required fields are marked *

Back to top button