ಬೆಳಗಾವಿಸುವರ್ಣ ಗಿರಿ ಟೈಮ್ಸ್

ಬೆಳಗಾವಿ: ಸದ್ದಿಲ್ಲದೇ ಕಾಡಮ್ಮೆ ಅಂತ್ಯ ಕ್ರಿಯೆ ಅರಣ್ಯಾಧಿಕಾರಿಗಳ ಮೇಲೆ ಕ್ರಮಕ್ಕಾಗಿ ಮನವಿ.

ಬೆಳಗಾವಿ: ಎರಡು ವರ್ಷಗಳ ಹಿಂದೆ ಕಾಡಮ್ಮೆ ಒಂದು ಭಾವಿಯಲ್ಲಿ ಬಿದ್ದು ಮೃತ ಹೊಂದಿದ್ದು ಸದ್ದಿಲ್ಲದೇ & ನಿಯಮ ಬಾಹಿರವಾಗಿ ಅಂತ್ಯಕ್ರಿಯೆ ಮಾಡಿದ ಹುಕ್ಕೇರಿ ವಲಯದ ಅರಣ್ಯ ಅಧಿಕಾರಿಗಳ ಮೇಲೆ ಕ್ರಮ ತಗೆದುಕೊಳ್ಳಲು ಪಿ.ಸಿ.ಸಿ.ಎಪ್ ಬೆಂಗಳೂರು ಇವರಿಗೆ ಮನವಿ ಮಾಡಲಾಗಿದೆ.

ಮನವಿಯಲ್ಲಿ ಪರಿಸರವಾದಿ ಮತ್ತು ವಕೀಲ ಸುರೇಂದ್ರ ಉಗಾರೆ ಇವರು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನುಸರಿಸದೆ ನಿಯಮಬಾಹಿರ ಭಾರತೀಯ ಕಾಡೆಮ್ಮೆಯ ಶವವನ್ನು ವಿಲೇವಾರಿ ಮಾಡಿದ್ದಾರೆ ಇದರ ಕುರಿತು ಅಂದಿನ ಹುಕ್ಕೇರಿ ವಲಯ ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ್ ಮತ್ತು ಅರಣ್ಯ ರಕ್ಷಕ ದಯಾನಂದ ಅಂಕಲಗಿ ವಿರುದ್ಧ ಔಪಚಾರಿಕ ದೂರು ದಾಖಲಾಗಿದೆ.

ನಡೆದ ಘಟನೆ:

ಡಿಸೆಂಬರ್ 2022 ರಲ್ಲಿ ಹಿಡಕಲ್ ಅಣೆಕಟ್ಟಿನ ಬಳಿಯ ಬಾವಿಗೆ ಕಾಡೆಮ್ಮೆ ಬಿದ್ದು ಸಾವನ್ನಪ್ಪಿತ್ತು. ಅಂದು ಅರಣ್ಯ ರಕ್ಷಕ ಅಂಕಲಗಿ ಅವರು ಕಾನೂನು ಕ್ರಮಗಳನ್ನು ಅನುಸರಿಸಿ ಸೂಕ್ತ ಮರಣೋತ್ತರ ಪರೀಕ್ಷೆ ನಡೆಸುವ ಬದಲು ಜೆಸಿಬಿ ಬಳಸಿ ಮೃತದೇಹವನ್ನು ಟ್ರ್ಯಾಕ್ಟರ್‌ಗೆ ತುಂಬಿ ಸಾರ್ವಜನಿಕರ ಸಮ್ಮುಖದಲ್ಲಿ ಸಾಗಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಇದರಕುರಿತು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಅಂಕಲಗಿ ವಿಲೇವಾರಿ ಪ್ರಕ್ರಿಯೆಯಲ್ಲಿ ಸಮವಸ್ತ್ರದಲ್ಲಿ ಇರದೇ, ಅವರ ನಾಗರಿಕರ ಬಟ್ಟೆಯಲ್ಲಿ ನಿಂತಿದ್ದಾರೆ. ದೂರಿನಲ್ಲಿ ವೀಡಿಯೊ ದೃಶ್ಯಾವಳಿ ಮತ್ತು ಫೋಟೋಗಳನ್ನು ಸಾಕ್ಷ್ಯವಾಗಿ ನೀಡಲಾಗಿದೆ.

ಅದರಂತೆ ಮರಣೋತ್ತರ ಪರಿಕ್ಷೆಯ ಕುರಿತು ಹುಕ್ಕೇರಿ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿ ಇವರು ನೀಡಿದ ಮಾಹಿತಿ ಪ್ರಕಾರ, ಹುಕ್ಕೇರಿ ತಾಲೂಕಿನಲ್ಲಿ 2021 ರಿಂದ 2024 ರವರೆಗೆ ಯಾವುದೇ ವನ್ಯಜೀವಿ ಸಾವಿನ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗಿಲ್ಲ ಎಂದು ದೃಢಪಡಿಸಿದ್ದಾರೆ, ಇದು ಪಾರದರ್ಶಕತೆ ಮತ್ತು ಕಾರ್ಯವಿಧಾನದ ಲೋಪಗಳ ಕರ್ತವ್ಯಲೋಪವಾಗಿದೆ ಅದರಂತೆ, ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ್ ಅವರು ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಘಟನೆ ಕುರಿತು ವರದಿ ಮಾಡುವಲ್ಲಿ ವಿಫಲರಾಗಿದ್ದಾರೆ ಆದರೂ ಎರಡು ವರ್ಷಗಳಿಂದ ಇಲಾಖೆಗೆ ಗೊತ್ತೇ ಇಲ್ಲಾ ಎನ್ನುವದು ವಿಪರ್ಯಾಸ.

ಭಾರತೀಯ ಕಾಡೆಮ್ಮೆಯು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಅಡಿಯಲ್ಲಿ ‘ಶೆಡ್ಯೂಲ್-1’ ಸಂರಕ್ಷಿತ ಜಾತಿಯಾಗಿದೆ ಮತ್ತು ‘ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್’ (IUCN) ನಿಂದ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ವರ್ಗೀಕರಿಸಲಾಗಿದೆ ಎಂದು ದೂರುದಾರ ಸುರೇಂದ್ರ ಉಗಾರೆ ಹೇಳಿದ್ದಾರೆ ಮತ್ತು ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತು ಕ್ರಮ & ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button