ಕಡಿಮೆ ಬೆಲೆಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡಿದ್ರಾ ಶಿವಪ್ರೀಯಾ ಕಡೆಚೂರ್ !?
ಬೆಳಗಾವಿ: ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಕಛೇರಿಯಲ್ಲಿ ಕಛೇರಿಯ ಉಪಯೋಗ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬಿಲ್ಲ್ ತೋರಿಸಿ ಹಣವನ್ನು ತೆಗೆದು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಗಾವಿಯ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಕಛೇರಿಯಲ್ಲಿ ಕಛೇರಿಯ ಉಪಯೋಗಕ್ಕಾಗಿ ವಸ್ತುಗಳನ್ನು ಖರೀದಿ ಮಾಡುವ ಸಲುವಾಗಿ ದರ ಪಟ್ಟಿ ಬಿಡುಗಡೆ ಮಾಡಿ, ಆ ಪ್ರಕಾರ ಅವರು ಕಡಿಮೆ ಬೆಲೆಯ ವಸ್ತುಗಳನ್ನು ಅತಿ ಹೆಚ್ಚು ಬೆಲೆಗೆ ಖರೀದಿ ಮಾಡಿ ಹಣ ಹೊಡೆಯುವ ಕೆಲಸ ಮಾಡಿದ್ದಾರೆಂದು ಬೆಳಗಾವಿಯ ವಕೀಲ ನಿಂಗಪ್ಪ ಭಜಂತ್ರಿ ದಾಖಲಾತಿ ಸಮೇತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮನವಿಯಲ್ಲಿ ವಸ್ತುಗಳ ಖರೀದಿಯ ವ್ಯವಹಾರದಲ್ಲಿ ಗ್ಲೋಬಲ್ ಟ್ರೇಡಸ್ ಇವರು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಂದಿನ ಅಧಿಕಾರಿಗಳಾದ ಉಪನಿರ್ದೇಶಕರಾದ ಶಿವಪ್ರಿಯಾ ಕಡೆಚೂರ ಇವರು ಹೊಂದಾಣಿಕೆ ಮಾಡಿಕೊಂಡು ಹಣ ಲೂಟಿ ಮಾಡಿದ್ದಾರೆ. ಅದೆ ರೀತಿ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಕಚೇರಿಯಲ್ಲಿನ ಹೊಸ ಸೋಪಾ ಬದಲು ಹಳೆಯದಾದ ಒಂದು ವುಡನ್ ಸೋಪಾ ಇರುತ್ತದೆ. ಆದರೆ ಹೋಸ ಸೋಪಾ ಇರುವುದಿಲ್ಲ. ಆದರೆ ಸೋಪಾ ಹೋದದ್ದು ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನು ಸಲಕರಣೆಗಳನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುತ್ತಾರೆಂದು ದೂರಿದ್ದಾರೆ.
ವಕೀಲ ತಮ್ಮ ಮನವಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡ ಅಧಿಕಾರಿಗಳಾದ ಉಪ ನಿರ್ದೇಶಕರು (ಹಿಂದಿನ ಅಧಿಕಾರಿಗಳು) ಶಿವಪ್ರಿಯಾ ಕಡೆಚೂರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯ ಮೇಲೆ ಕ್ರಮ ಕ್ರಮ ತಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.