ಬೆಳಗಾವಿಸುವರ್ಣ ಗಿರಿ ಟೈಮ್ಸ್
ಬೆಳ್ಳಂ ಬಿಳಿಗ್ಗೆ ಜೆಸಿಬಿ ಗರ್ಜಣೆ: ಒತ್ತುವರಿ ತೆರವುಗೋಳಿಸಿದ ಅರಣ್ಯ ಇಲಾಖೆ.

ರಾಯಬಾಗ: ಅರಣ್ಯ ಸಚಿವರ ಹಾಗೂ ಹೈಕೋರ್ಟ್ ಆದೇಶ ಮೇರೆಗೆ ರಾಜ್ಯದಲ್ಲಿ ಅರಣ್ಯಒತ್ತುವರಿ ಮಾಡಿದ ಅರಣ್ಯ ಆಸ್ತಿಯನ್ನು ತೆರವು ಮಾಡುವ ಕಾರ್ಯ ಇಂದು ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆಯಿತು.
ರಾಯಬಾಗ ಪಟ್ಟಣದ ಹೊರಗೆ ಇರುವ ವಿವೇಕ್ ನಗರ ಹತ್ತಿರ ಇರುವ ಅರಣ್ಯ ಜಮೀನವನ್ನು ಒತ್ತುವರಿ ಮಡಿದ 7.20 ಗುಂಟೆ ಜಾಗವನ್ನು ಆಕ್ರಮಿಸಿಕೊಂಡವರ ವಿರುದ್ದ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಮಾಡಿ ಅರಣ್ಯ ಇಲಾಖೆಗೆ ಸೇರ್ಪಡೆಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಯಬಾಗದ ACF ನಾಗರಾಜ್ ಬಿ. RFO ಉಮೇಶ್ ಪ್ರಧಾನಿ, RFO ರಾಕೇಶ್. RFO ರಕ್ಕಸಗಿ ಹಾಗೂ ಸಿಬ್ಬಂಧಿ ಹಾಜರಿದ್ದರು. ತೆರವು ಕಾರ್ಯಚಾರಣೆಯಲ್ಲಿ ರಾಯಬಾಗ ಪೊಲೀಸ್ ಬಂದೋಬಸ್ತ ಏರ್ಪಡಿಸಿದ್ದರು.