ಅಪಘಾತವೋ ಅಥವಾ ಕೊಲೆಯ ಷಡ್ಯಂತ್ರವೋ ? ವಿಜಯಪೂರ ವಕೀಲ ರವಿ ಮೇಲಿನಮನಿಯ ಕೊಲೆ.
ವಿಜಯಪುರ: ನಗರದಲ್ಲಿ ಗುರುವಾರ ಸಂಜೆ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಡಿ ಸಿಲುಕಿ ಮೃತಪಟ್ಟ ದ್ವಿಚಕ್ರ ವಾಹನ ಸವಾರನನ್ನು ಕಾರು ಚಾಲಕ ಎರಡು ಕಿ.ಮೀ.ದೂರ ಎಳೆದೊಯ್ದ ಘಟನೆ ನಡೆದಿದೆ.
ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದ ನಿವಾಸಿ, ವಕೀಲ ರವಿ ಮೇಲಿನಮನಿ (37) .ಮೃತರು ವಿಜಯಪುರದ ಬಸವನಗರದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ರವಿ ಮೇಲಿಮನಿಯವರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೇಲಿನಮನಿ ಅವರ ದೇಹ ಕಾರಿನಡಿ ಸಿಲುಕಿದೆ. ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಇದೊಂದು ಪೂರ್ವಯೋಜಿತ ಘಟನೆ ಇರಬಹುದು. ರವಿ ಮೇಲಿನಮನಿ ಅವರು ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಅವರ ಸಂಬಂಧಿಕ ಎಂದು ತಿಳಿದು ಬಂದಿದೆ.
ರಸ್ತೆಯಲ್ಲಿ ನಿಂತಿದ್ದ ಜನರು ಕೂಗಿದರೂ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಚಾಲನೆ ಮಾಡಿದ್ದಾನೆ. ಎರಡು ಕಿ.ಮೀ. ದೂರದಲ್ಲಿರುವ ಜಿಲ್ಲಾ ಪಂಚಾಯಿತಿ ಪ್ರವೇಶದ್ವಾರದ- ವರೆಗೆ ಶವನನ್ನು ಎಳೆದೊಯ್ದು, ಅದು ಕಾರಿನಿಂದ ಬೆ ರ್ಪಟ್ಟ ಬಳಿಕ ಚಾಲಕ ಕಾರಿ ನೊಂದಿಗೆ ರವಿ ಮೇಲಿನಮನಿ ಪರಾರಿಯಾದ. ವಕೀಲ ಮೇಲಿನಮನಿ ದೇಹ ಛಿದ್ರವಾಗಿದೆ’ ಎಂದು ಪೊಲೀಸರು ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.