ಕೆಟಿಪಿಪಿ ಕಾಯಿದೆ ಉಲ್ಲಂಘಣೆ ಪ್ರಕರಣ ಅರಣ್ಯಾಧಿಕಾರಿಗಳ ಮೇಲೆ ಕ್ರಮ ತಗೆದುಕೊಳ್ಳಲು ಅರಣ್ಯ ಸಚಿವಾಲಯದ ಆಪ್ತ ಕಾರ್ಯದರ್ಶಿಯಿಂದ ಪತ್ರ.
ಬೆಂಗಳೂರು: ಧಾರವಾಡದ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಪಾರದರ್ಶಕ ಕಾಯಿದೆ ಉಲ್ಲಂಘಣೆ ಮಾಡಿದ್ದರ ಕುರಿತು ಅರಣ್ಯ ಸಚಿವಾಲಯದ ಆಪ್ತ ಕಾರ್ಯದರ್ಶಿಯಿಂದ ಸೂಕ್ತ ಕ್ರಮ ತಗೆದುಕೊಳ್ಳಲು ಪ್ರಧಾನ ಅರಣ್ಯ ಸಂರಕ್ಷರಿಗೆ ಸೂಕ್ತ ಕ್ರಮ ತಗೆದುಕೊಳ್ಳಲು ಆದೇಶ ಮಾಡಿದ್ದಾರೆ.
ಪ್ರಕರಣದ ಹಿನ್ನಲೆ: ಧಾರವಾಡದ ಅರಣ್ಯ ಇಲಾಖೆಯಲ್ಲಿ ಕೆಟಿಪಿಪಿ ಕಾಯಿದೆ ಉಲ್ಲಂಘಸಿದ್ದಕ್ಕಾಗಿ ಧಾರವಾಡ ಡಿ.ಎಫ.ಓ ವಿವೇಕ ಕವರಿ ಹಾಗೂ ಇತರ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಅರಣ್ಯ ಸಚಿವರಿಗೆ ಮನವಿಯ ಮುಖಾಂತರ ವಕೀಲ & ಪರಿಸರವಾದಿ ಸುರೇಂದ್ರ ಉಗಾರೆ ಇವರು ಒತ್ತಾಯಿಸಿದ್ದರು.
ಧಾರವಾಡದ ಓಂಬಡ್ಸಮನ ಅವರು ಒಟ್ಟು ಐದು ಪ್ರಕರಣಗಳನ್ನು ಧಾಕಲಿಸಿದ್ದು ಅದರಲ್ಲಿ ಪಾರದರ್ಶಕ ಕಾಯಿದೆ ಉಲ್ಲಂಘಿಸಿದ್ದ ಕಂಡು ಬಂದಿದೆ ಆ ಪ್ರಕಾರ ಅನಿಯಮಿತ ಹಣ ಸಂದಾಯ ಮಾಡಿದ ಹಣವನ್ನು ಅರಣ್ಯ ಅಧಿಕಾರಿಗಳಿಂದ ವಸೂಲಿ ಮಾಡಬೇಕೆಂದು ಆದೇಶ ಮಾಡಿದ್ದಾರೆ ಆದರೆ ಅಧಿಕಾರಿಗಳು ಪ್ರಕರಣದ ಬಗ್ಗೆ ಗಮನ ಕೊಡದೇ ಕ್ರಮ ತಗೆದುಕೊಳ್ಳಲು ನಿರಾಶಕ್ತಿ ವಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದರು.
ಸಾಮಾಜಿಕ ಅರಣ್ಯ ಇಲಾಖೆಯ, ಧಾರವಾಡ ಡಿಎಫಓ ವಿವೇಕ ಕವರಿಯವರು ರೂ 23,52,904=85, ಅಶೋಕ ಚೌಗಲಾ ಎಸಿಎಫ್ ಧಾರವಾಡ ಇವರು 15,85,113=85, ಕೆ.ಡಿ. ನಾಯಿಕ ಎ.ಸಿ.ಎಫ್ ಧಾರವಾಡ ಇವರು ರೂ 7,62,791=00, ಶರಣಬಸಪ್ಪ ಹೊಸಹಳ್ಳಿ ಆರ್.ಎಫ್ ಓ ಕಲಘಟಗಿ ಇವರು 3.11,231=15, ಶಿವಾನಂದ ಪೂಜಾರ ಆರ್.ಎಫ್.ಓ ನವಲಗುಂದ ಇವರು 3.05,156=70, ಸಂತೋಷ ಹಿರೇಮಠ ಆರ್.ಎಫ.ಓ. ಹುಬ್ಬಳ್ಳಿ ಇವರು 5,36,053=00, ರಜಾಕಸಾಭ್ ನದಾಫ್ ಆರ್ ಎಫ್.ಓ ಕುಂದಗೋಳ ಇವರು 4,32,673=00 ಹಾಗೂ ಈರೇಶ ಕಬ್ಬಿನ್ ಆರ್.ಎಫ್.ಓ. ಧಾರವಾಡ ಇವರು 7,62,991=33 ಗಳನ್ನು ಹಣ ವಸೂಲಿ ಮಾಡಿ ಇಲಾಖೆಗೆ ಸಂದಾಯ ಮಾಡಬೇಕು ಎಂದು ಆದೇಶ ಮಾಡಿದ್ದಾರೆ ಎಂದು ಕಳೆದ ವಾರ ಧಾಖಲೆ ಸಮೇತ ಅರಣ್ಯ ಸಚಿವರಿಗೆ ಮನವಿ ಮಾಡಿದ್ದರು.