ಕೊಡಗುಸುವರ್ಣ ಗಿರಿ ಟೈಮ್ಸ್
ಮರವೊಂದರಲ್ಲಿ ಬಾಲಕಿಯ ರುಂಡ ಪತ್ತೆ !!

ಕೊಡಗು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಬಾಲಕಿ ರುಂಡ ಪತ್ತೆಯಾಗಿದೆ.
ಕೊಲೆ ಆರೋಪಿ ಈಗ ಪೊಲೀಸರ ವಶದಲ್ಲಿದ್ದು, ಬಾಲಕಿಯ ತಲೆ ಶೋಧಕ್ಕಾಗಿ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆತಂದಿದ್ದರು. ಹತ್ಯೆ ಮಾಡಿದ್ದ ಸ್ಥಳದ ಸಮೀಪದಲ್ಲೇ ಮರವೊಂದರಲ್ಲಿ ಬಾಲಕಿಯ ತಲೆ ಸಿಕ್ಕಿದೆ.
ಬಾಲಕಿ ತಲೆಯನ್ನು ಮರದ ಮೇಲಿಟ್ಟಿರುವುದಾಗಿ ಆರೋಪಿ ಹೇಳಿದ್ದ. ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ಲಾಸ್ಟಿಕ್ ಚೀಲದ ಬ್ಯಾಗಿನಲ್ಲಿ ತಲೆ ಸಾಗಿಸಿದ್ದಾರೆ.
ನಿನ್ನೆ ಇಡೀ ದಿನ ಹುಡುಕಾಡಿದ್ದರೂ ಬಾಲಕಿ ಮೀನಾ ತಲೆ ಪತ್ತೆಯಾಗಿರಲಿಲ್ಲ. ಹುಡುಕಾಡಿದ್ದ ಸ್ಥಳದಲ್ಲೇ ಮರದ ಮೇಲೆ ಆರೋಪಿ ತಲೆ ಇರಿಸಿದ್ದ.