ಅಂಕಣಸುವರ್ಣ ಗಿರಿ ಟೈಮ್ಸ್

ಡಾ. ಬಾಬಾಸಾಹೇಬ್ ಮತ್ತವರ ಮಧ್ಯಪಾನದ ಕುರಿತ ಚಿಂತನೆಗಳು.

ಗಂಡಸರ ಮದ್ಯಪಾನದಿಂದ ಬೇಸತ್ತಿದ್ದ ಮಹಿಳೆಯರ ನೋವುಗಳನ್ನು ಅರಿತಿದ್ದ ಬಾಬಾಸಾಹೇಬರು 1942 ರಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಮಹಿಳೆಯರ ಸಮ್ಮೆಳನದಲ್ಲಿ ” ಮಧ್ಯಸೇವಿಸಿ ಬರುವ ಗಂಡನಿಗೆ ಆಹಾರ ಕೊಡಬೇಡಿ “ಎಂದು ಮಹಿಳೆಯರಿಗೆ ಕರೆನೀಡಿದ್ದರು. ಕುಡಿತ ಮತ್ತು ಅತಿಯಾದ ಕುಡಿತದಿಂದ ಮಹಿಳೆ ಮತ್ತು ಮಕ್ಕಳ ಮೇಲಾಗುವ ಭೀಕರ ದುಷ್ಪರಿಣಾಮಗಳನ್ನು ಮನಗಂಡಿದ್ದರಿಂದ ಅಂದು ಬಾಬಾಸಾಹೇಬರು ಹಾಗೆ ಕರೆಕೊಡುವOತಾಗಿತ್ತು. ವ್ಯಸನಗಳ ಪ್ರಭಾವಕ್ಕೆ ಸಿಲುಕಿ ಕಷ್ಟಗಳನ್ನು ಮೈಮೇಲೆಳೆದುಕೊಂಡು ಮುಂದೆ ಬದುಕಲಿಕ್ಕಾಗದೆ ಬದುಕನ್ನೇ ಕಳೆದುಕೊಳ್ಳುವ ಉದಾಹರನೆಗಳು ಹೇರಳವಾಗಿದ್ದವು. ಆದರೂ ಅತಿಯಾದ ಕುಡಿತದಿಂದ ಸತ್ತವರ ಅದರಲ್ಲೂ ವಿಶೇಷವಾಗಿ ಕುಡಿತದ ಕಾರಣ ಲಿವರ್ ತೊಂದರೆಯಿOದ ಅದೆಷ್ಟೋ ಜನ ಸಾಯುತ್ತಿದ್ದರೂ ಸಾರ್ವಜನಿಕ ಆರೋಗ್ಯ ಇಲಾಖೆಯವರು ಸತ್ತವರ ಕುರಿತ ಮಾಹಿತಿ ಇಟ್ಟಿಲ್ಲ !? ಇಡಬೇಕೆಂದು ಅವರಿಗೆ ಅನಿಸುವುದಿಲ್ಲವೆ !? ಎಂದು ಸರಕಾರವನ್ನು ಕೇಳುತ್ತಾರೆ.

ವಿಚಿತ್ರವೆOದರೆ ಈ ದೇಶದಲ್ಲಿರುವ ಎಲ್ಲಾ ಧರ್ಮಗಳು ಸರಾಯಿಯನ್ನು ಮನ್ನಿಸುವುದಿಲ್ಲ. ಈ ಧರ್ಮಗಳು ಹಲವಾರು ಕೆಟ್ಟ ಕೆಲಸಗಳನ್ನು ಮಾಡಿರಬಹುದು ಆದರೂ ಮಧ್ಯಪಾನದ ವಿಷಯದಲ್ಲಿ ಹಿOದೂ, ಮುಸ್ಲಿಮ್ ಅಥವಾ ಝೇರೋಸ್ಟ್ರಿಯನ್ ಧರ್ಮವೇ ಆಗಿರಲಿ ಇಂತಹ ಕೆಲವೊOದು ವಿಷಯಗಳಲ್ಲಿ ಒಳ್ಳೆಯದನ್ನೇ ಮಾಡಿವೆ ಎಂದು ಹೇಳುತ್ತಾರೆ.

ಹೀಗಿದ್ದಾಗ್ಯೂ ಕುಡಿತ ಒಂದು ಸಾಮಾಜೀಕ ಅನಿಷ್ಟವಾಗಿ ಬೆಳೆದು ನಿOತಿದೆ.ಹೆಚ್ಚಾಗಿ ಪುರುಷರೇ ಕುಡಿಯುತ್ತಾರೆ. ಆದರೆ ಅತ್ಯಂತ ಕುಡುಕನೂ ಸಹ ತನ್ನ ಹೆOಡತಿ ಮತ್ತು ಮಕ್ಕಳು ಕುಡಿಯುವುದನ್ನು ಸಹಿಸುವುದಿಲ್ಲ !? ಆದರೆ ಅವನ ಕುಡಿತದಿOದಾದ ದುಷ್ಪರಿಣಾಮಗಳನ್ನು ಎಲ್ಲರೂ ಎದುರಿಸಬೇಕಾಗುತ್ತದೆ. ಇದರಿಂದಾಗಿ ಸಾಮಾಜೀಕ ಸ್ವಾಶ್ತ್ಯ ಕೆಡುತ್ತಿದೆ.ಕೆಟ್ಟ ಪರಿಸ್ಥಿತಿಗಳು ಅನೈತಿಕತೆಗಳಿಗೆಡೆಮಾಡಿಕೊಡುತ್ತಿವೆ. ಹೀಗೆಂದು ಮುಂಬೈ ಶಾಸನ ಸಭೆಯಲ್ಲಿ ಮಾತನಾಡುತ್ತ ಕುಡಿತ ಸಾಮಾಜಕ್ಕೆ ಮಾರಕ ಎಂಬುದಕ್ಕೆ ಹಲವಾರು ಕಾರಣಗಳನ್ನು ಕೊಡುತ್ತ ಮಧ್ಯಪಾನ ನಿಷೇಧಿಸಬೆಕೆOದು ಒತ್ತಾಯಿಸುತ್ತಾರೆ.

ಅಬಕಾರಿಯಿಂದ ಅತೀ ಹೆಚ್ಚು ತೆರಿಗೆ ರೂಪದಲ್ಲಿ ಹಣ ಬರುತ್ತದೆOದು ಹಣಮಾಡುವುದೇ ಸರಕಾರದ ಗುರಿಯಾಗಬಾರದು. ಕೇವಲ ಕಂದಾಯದ ಉದ್ದೇಶದಿಂದ ಜನತೆಯನ್ನು ಮದ್ಯಪಾನದ ದಾಸರನ್ನಾಗಿಸಿ ಅದರಿOದ ಅವರು ಬಿಕ್ಷುಕರಾದರೆ, ಅಂತಹ ಬಿಕ್ಷುಕರನ್ನಾಗಿಸುವ ರಾಜ್ಯವು ತಾನೇ ಬಿಕ್ಷೆ ಬೇಡಬೇಕಾದ ಮಟ್ಟತಲುಪುತ್ತದೆಂದು ಸರಕಾರವನ್ನು ಎಚ್ಚರಿಸುತ್ತಾರೆ.

ಎಚ್ಚರಿಸುವುದರೊಂದಿಗೆ ಪಾನ ಪ್ರತಿಭಂದದಿಂದಾಗಿ ರಾಜ್ಯಕ್ಕಾಗುವ ಆದಾಯ ನಷ್ಟವನ್ನು ಸರಿದೂಗಿಸುವ ಮಾರ್ಗಗಳನ್ನು ಸಹ ಸೂಚಿಸುತ್ತಾರೆ.

ಬಾಬಾಸಾಹೇಬರ ಅಂದಿನ ಚಿಂತನೆಗಳು ನಮ್ಮನ್ನೀಗ ಎಚ್ಚರಿಸಬೇಕಾಗಿವೆ. ಇತ್ತೀಚಿನ ಸುಪ್ರೀಮ್ ಕೋರ್ಟ್ ತೀರ್ಪಿನಿOದಾಗಿ ದೇಶಾದ್ಯಂತ ಪರ ಮತ್ತು ವಿರೋಧ ಚರ್ಚೆಗಳು ಹುಟ್ಟಿಕೊOಡಿವೆ. ಕೇವಲ ಮಧ್ಯದಂಗಡಿಗಳನ್ನು ಹೆದ್ದಾರಿಗಳಿOದ 500 ಮೀಟರ್ ದೂರಕ್ಕೆ ಸ್ಥಳಾಂತರ ದೊಡ್ಡ ವಿಷಯವನ್ನಾಗಿಸಿ ಸರಕಾರ ನಡೆಸಲು ಸಾದ್ಯವಾಗದು ಎಂಬಂತೆ ರಾಜ್ಯ ಸರಕಾರಗಳು ವರ್ತಿಸುತ್ತಿರುವಂತೆ ಕಾಣುತ್ತಿದೆ !?ಸುಪ್ರೀಮ್ ಕೋರ್ಟ್ ಒಂದು ವೇಳೆ ದೇಶದಲ್ಲಿ ಸಂಪೂರ್ಣ ಮಧ್ಯವನ್ನೇ ನಿಷೇಧ ಮಾಡಬೇಕೆOದು ತೀರ್ಪು ಕೊಟ್ಟಿದ್ದರೆ ಏನು ಮಾಡುತ್ತಿದ್ದರೋ…!?

ನಾನೂ ಸಹ ಹೇಳುವುದಿಷ್ಟೇ… ಕುಡಿತದ ಪರಿಣಾಮ ಕೆಟ್ಟದ್ದು. ಅದನ್ನು ಸಂಪೂರ್ಣ ನಿಷೇಧಕ್ಕೊಳಪಡಿಸದಿದ್ದರೂ ಹೆಚ್ಚು ಹೆಚ್ಚು ಕುಡಿಯುವಂತ ವ್ಯವಸ್ತೆ ಮಾಡಿ ಜನರನ್ನು ಅದರ ದಾಸರಾಗುವಂತೆ ಮಾಡುವ ಕ್ರಮಗಳಿಂದ ಹಿಂದೆ ಸರಿಯಬೇಕು. ಜವಾಬ್ದಾರಿ ಸರಕಾರವು ಜನರ ಜೀವನಮಟ್ಟವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಮತ್ತು ಸರಿಯಾದ ಸಂಬಳಗಳ ಬಗ್ಗೆ ಗಮನ ಹರಿಸಬೇಕು. ಇದರಿOದಾಗಿ ಮಾತ್ರ ಸOವಿಧಾನ ತೋರಿದ ಗುರಿ ತಲುಪಲು ಸಾದ್ಯ.
ಡಾ.ಗೌತಮ್ ಬನಸೋಡೆ.

Related Articles

Leave a Reply

Your email address will not be published. Required fields are marked *

Back to top button