ಬೆಳಗಾವಿ: ಭ್ರಷ್ಟಾಚಾರ ಆರೋಪ ಪಿಡಿಒ ಮನೆ ಮೇಲೆ ಲೋಕಾ ದಾಳಿ.

ಬೆಳಗಾವಿ: ಭ್ರಷ್ಟಾಚಾರ ಆರೋಪದ ಮೇಲೆ ಪಿಡಿಒ ಮನೆ ಮೇಲೆ ಬೆಳಗಾವಿ ಲೋಕಾಯುಕ್ತ ಪೊಲೀಸರು ಬೆಳ್ಳಂ ಬೆಳಿಗ್ಗೆ ದಾಳಿ ಮಾಡಿ ಪಿಡಿಒ ಗೆ ಶಾಕ್ ನೀಡಿದ್ದಾರೆ.
ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದ ನಿವಾಸಿ ಹಾಗೂ ನೀಡಗುಂದಿ ಗ್ರಾಮ ಪಂಚಾಯತ ಪಿಡಿಒ ಸದಾಶಿವ ಜಯಪ್ಪ ಕರಗಾರ ಇಂದು ಬೆಳಿಗ್ಗೆ ಇವನೇ ಶಾಕಿಗೆ ಒಳಗಾದ ಅಧಿಕಾರಿ.

ಇಂದು ಬೆಳಿಗ್ಗೆ ಮನೆಗೆ ಹೋದ ಲೋಕಾಯುಕ್ತ ಅಧಿಕಾರಿಗಳು ಮನೆಯ ವೈಭವವನ್ನು ನೋಡಿ ಘಾಭರಿಯಾಗಿದ್ದಾರಂತೆ, ಅಷ್ಟೇ ಅಲ್ಲಾ ಸದಾಶಿವ ಕರಗಾರ ಇವನಿಗೆ ಜಿ.ಎಲ್.ಬಿ.ಸಿ ಕಾಲುವೆ ಪಕ್ಕದಲ್ಲೇ ಮನೆ ಕಟ್ಟಲು ಅನುಮತಿ ಕೊಟ್ಟವರು ಯಾರು ಅಂದ್ರಂತೆ ? ನಂತರ ಲೋಕಾ ಅಧಿಕಾರಿಗಳು ಮನೆಯಲ್ಲಿನ ಆಸ್ತಿಗೆ ಸಂಬಂದಿಸಿದ ಕಾಗದ ಪತ್ರಗಳನ್ನು ತಪಾಸನೆ ಮಾಡಿದ್ದಾರೆ, ಅದರ ಜೊತೆಗೆ ಲಕ್ಷಾಂತರ ರೂ ಹಣ ದೊರೆಯಿತು ಎಂದು ಮಾಹಿತಿ ಲಭ್ಯವಾಗಿದೆ. ಇನ್ನೋಂದು ವಿಷೇಶ ವೆಂದರೆ ಬೆಕ್ಕೇರಿ ಪಂಚಾಯಿತಿ ಅಧಿಕಾರಿ ಯಾಗಿದ್ದಾಗ 20 ಗುಂಟೆ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ಮಾರಾಟ ಮಾಡಿದ ಬಗ್ಗೆ ಕಾಗದ ಪತ್ರಗಳು ಲಭ್ಯವಾಗಿವೆ. ಮತ್ತು ಕರಗಾರ ಇವನು ಯಾರ ಜೊತೆ ಹಣಕಾಸಿನ ವ್ಯವಹಾರ ಮಾಡಿದ್ದಾರೆಂಬುದರ ಬಗ್ಗೆ ಪರೀಶೀಲಣೆ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.

ಮೊನ್ನೆ ಮೊನ್ನೆಯಷ್ಟೆ ಲೋಕಾಯುಕ್ತರು ಐದು ಸಾವಿರ ಪಡೆಯುವ ವೇಳೆ ರೆಡ್ ಹ್ಯಾಂಡ ಆಗಿ ಹಿಡಿದು ಜೈಲಿಗೆ ಜೈಲಿಗೆ ಕಳಿಸಿದ್ದರು ಅಲ್ಲಿಂದ ಬಂದು ಏಳು ರಾತ್ರಿಗಳನ್ನು ಕಾಣುವ ಮೊದಲೇ ಲೋಕಾಯುಕ್ತರು ಅಧಿಕಾರಿ ಸದಾಶಿವ ಜಯಪ್ಪಾ ಕರಗಾರ ಇವನಿಗೆ ಮತ್ತೇ ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ. ಆದರೆ ರೇಡ ಬಗ್ಗೆ ಅಧಿಕೃತ ಮಾಹಿತಿಯನ್ನು ಪೊಲೀಸರು ಬಹಿರಂಗ ಮಾಡಬೇಕಿದೆ.