ಕೆರೆಗೆ ಪೆಟ್ರೋಲ್ ಸುರಿದು ಪುಂಡಾಟ !

ಚೆನ್ನೈ: ರೀಲ್ಸ್ ಮಾಡುವ ಹುಚ್ಚಿನಿಂದಾಗಿ ಯುವಕರ ಗುಂಪೊಂದು ಕೆರೆ ನೀರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ಹಾರಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಸರು ಹಾಗೂ ಹಣಗಳಿಕೆಗೋಸ್ಕರ ಹಲವರು ತಮ್ಮ ಪ್ರಾಣದ ಮೇಲಿನ ಹಂಗು ತೊರೆದು ವೀಡಿಯೋ ಮಾಡಲು ಮುಂದಾಗುತ್ತಾರೆ. ಇಂಥದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಯೂಟ್ಯೂಬರ್ ರಂಜಿತ್ ಬಾಲಾ ಮತ್ತು ಆತನ ಸ್ನೇಹಿತರು ತೂತುಕುಡಿ ಜಿಲ್ಲೆಯ ಸತ್ತಾಂಕುಲಂನಲ್ಲಿ ಕೆರೆ ನೀರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ಹಾರಿದ್ದಾರೆ.
ಕೆರೆಯ ಪಕ್ಕದ ಗೋಡೆಯ ಮೇಲಿಂದ ರಂಜಿತ್ಬಾಲಾ ಮತ್ತು ಆತನ ಸ್ನೇಹಿತ ಕೆರೆಯ ನೀರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ,ನಂತರ ಬೆಂಕಿಯ ಮಧ್ಯದಲ್ಲಿ ಹಾರಿದ್ದಾರೆ. ಈ ಸಂದರ್ಭದಲ್ಲಿ ಒಬ್ಬನ ಮೇಲೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಅವನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.