ಬಾಗಲಕೋಟೆಸುವರ್ಣ ಗಿರಿ ಟೈಮ್ಸ್

ಲೋಕಾಯುಕ್ತ ಬಲೆಗೆ ಬಿದ್ದ ಹೆಡ್​​ ಕಾನ್ಸ್​​ಟೇಬಲ್.!

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆಯ ಹೆಡ್​​ ಕಾನ್ಸ್​​ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ಹೆಡ್​​ ಕಾನ್ಸ್​​ಟೇಬಲ್ ಅರ್ಜುನ್ ಸಾಲಾಪೂರ ಅಪಘಾತಕ್ಕೊಳಗಾಗಿದ್ದ ಬೈಕ್ ರಿಲೀಸ್ ಮಾಡಲು 25 ಸಾವಿರ ರೂಪಾಯಿ ಲಂಚದ‌ ಬೇಡಿಕೆ ಇಟ್ಟಿದ್ದರು‌.

ಈ ಬಗ್ಗೆ ಬೈಕ್ ಮಾಲೀಕ ಸಂತೋಷ್ ಕೆಂಪಲಿಂಗನ್ನವರ ಎನ್ನುವರು ಲೋಕಾಯುಕ್ತಕ್ಕೆ ದೂರು‌ ನೀಡಿದ್ದರು.

25 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇದ್ದಾಗಲೇ ಈ ದಾಳಿ ನಡೆದಿದೆ.

ನಂತರ ಅದೇ ಠಾಣೆಯಲ್ಲಿಯೇ ಹೆಡ್ ಕಾನ್ಸ್‌ಟೇಬಲ್ ವಿಚಾರಣೆ ನಡೆಸಲಾಗಿದೆ. ಲೋಕಾಯುಕ್ತ ಎಸ್​​ಪಿ ಶಂಕರ್ ರಾಗಿ‌ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು.

Related Articles

Leave a Reply

Your email address will not be published. Required fields are marked *

Back to top button