ನಾಗನೂರಿನ ಸರ್ಕಾರಿ ಶಾಲೆಗೆ ಶ್ರೀ ಎಸ್. ಆರ್. ತಲ್ಲೂರ ಪೌಂಡೇಶನ್ ವತಿಯಿಂದ ಬಣ್ಣದ ಸೇವೆ ಹಾಗೂ ಸ್ವಚ್ಛತಾ ಕಾರ್ಯಕ್ರಮ.

ಬೆಳಗಾವಿ: ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾಮದಲ್ಲಿ ಶ್ರೀ ಎಸ್.ಆರ್.ತಲ್ಲೂರ ಪೌಂಡೇಶನ್ (ರಿ) ಧಾರವಾಡ ವತಿಯಿಂದ ನಾಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಶ್ರೀ ಎಸ್.ಆರ್.ತಲ್ಲೂರ ಪೌಂಡೇಶನ್ ಕಾರ್ಯದರ್ಶಿ ನಾಗೇಶ್ ರುದ್ರಪ್ಪ ತಲ್ಲೂರ ಅವರು ಶಾಲೆಗೆ ಬಣ್ಣ ಹಚ್ಚುವ ಮೂಲಕ ಬಣ್ಣ ದರ್ಪಣೆ ಗೆ ಚಾಲನೆ ನೀಡಿ ಅವರು ಮಾತನಾಡಿ, ಆದರ್ಶ ಅಧಿಕಾರಿ ಎಸ್.ಆರ್.ತಲ್ಲೂರ ಅವರು ಇದೆ ಶಾಲೆಯಲ್ಲಿ ಕಲಿತು ಮುಂದೆ ಅಸಿಸ್ಟೆಂಟ್ ಕಮಿಸಿನರ್ ಆಗಿ ಕಾರ್ಯನಿರ್ವಹಿಸಿದರು. ಶಾಲೆಯ ಎಲ್ಲ ಕೊಠಡಿಗಳಿಗೆ ಆಗುವಷ್ಟು ಬಣ್ಣವನ್ನು ಸ್ವತಃ ಪೌಂಡೇಶನ್ ವತಿಯಿಂದ ತೆಗೆದುಕೊಂಡು 40ಕ್ಕೂ ಹೆಚ್ಚು ಸದಸ್ಯರು ಉಚಿತವಾಗಿ ಬಣ್ಣ ಹಚ್ಚಲಿದ್ದಾರೆ. ಸಮಾಜ ಸೇವೆಯ ಮೂಲಕ ಸದೃಢ ಭಾರತವನ್ನು ನಿರ್ಮಿಸುವುದೇ ನಮ್ಮೆಲ್ಲ ಆಶೆಯಾಗಿದೆ. ಅವರ ಕಂಡ ಕನಸುಗಳನ್ನು ನನಸು ಮಾಡುವ ಸಲುವಾಗಿ ಇಂತಹ ಕಾರ್ಯಗಳನ್ನು ನಿರ್ವಹಿಸುತಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಆರ್.ತಲ್ಲೂರ ಪೌಂಡೇಶನ್ ಸದಸ್ಯರಾದ ವಸಂತ ರುದ್ರಪ್ಪ ತಲ್ಲೂರ ಹಾಗೂ ಶ್ರೀಶೈಲ ದೇಸಾಯಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಪಾಟೀಲ, ಶಾಲೆಯ ಮುಖ್ಯ ಗುರುಗಳು ಎಸ್.ವಿ.ಪೂಜಾರಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ಹೊಳೆಯಪ್ಪ ಕಲ್ಲಗುಡಿ, ಹಾಗೂ ಶಾಲೆಯ ಶಿಕ್ಷಕರು, ಊರಿನ ನಾಗರಿಕರು ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.