ಧಾರವಾಡಸುವರ್ಣ ಗಿರಿ ಟೈಮ್ಸ್
ರಜೆ ನೀಡದ ಸಿದ್ದರಾಮಯ್ಯ ಹಿಂದೂ ವಿರೋಧಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ. ಅದಕ್ಕೆ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನ ರಜೆ ಘೋಷಿಸಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಕಾಂಗ್ರೆಸ್‌ನವರು ಯಾವಾಗಲೂ ಹಿಂದೂ ವಿರೋಧಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೊರತಲ್ಲ. ಮೊದಲು ಅಯೋಧ್ಯೆಗೆ ಹೋಗಲ್ಲ ಎಂದಿದ್ದರು. ಎಲ್ಲೆಡೆ ವಿರೋಧ ವ್ಯಕ್ತವಾದ ಕೂಡಲೇ, ಹೋಗುವುದಾಗಿ ಹೇಳಿದರು. ಮತಗಳ ಸಲುವಾಗಿ ಅವರು ಹೋಗುವುದಾಗಿ ಹೇಳಿದ್ದಾರೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಒಬ್ಬ ಶ್ರೇಷ್ಠ ಸಂತ ಬಂದು ಮಂದಿರ ನಿರ್ಮಿಸಲಿ ಎಂದು ಶ್ರೀರಾಮ ಕಾದಿದ್ದ. ಶ್ರೇಷ್ಠ ಸಂತನ ರೂಪದಲ್ಲಿ ಪ್ರಧಾನಿ ಮೋದಿ ಬಂದಿದ್ದಾರೆ. ಕಳಂಕ ರಹಿತ ಆಡಳಿತ ನೀಡಿದ್ದಾರೆ. ಸಮಾಜಕ್ಕಾಗಿಯೇ ಬದುಕಿದ್ದಾರೆ. ರಾಮನ ಆದರ್ಶ ಪಾಲಿಸುತ್ತ, ದೇಶ ಮುನ್ನೆಡೆಸಿದ್ದಾರೆ. ರಾಮಮಂದಿರ ಉದ್ಘಾಟನೆಯನ್ನು ದೇಶದೆಲ್ಲೆಡೆ ಜನರು ಸಂಭ್ರಮದಿಂದ ಆಚರಿಸಿದ್ದಾರೆ’ ಎಂದರು.