ದಕ್ಷಿಣಕನ್ನಡಸುವರ್ಣ ಗಿರಿ ಟೈಮ್ಸ್

ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪಲ್ಲ: ಸ್ಪೀಕರ್ ಯುಟಿ ಖಾದರ್

ದಕ್ಷಿಣ ಕನ್ನಡ: ಶಾಲೆಗಳಲ್ಲಿ ಮಕ್ಕಳಿಗಾಗಿ ಇರುವ ಶೌಚಾಲಯವನ್ನು ಸೂಕ್ತ ಸ್ವಚ್ಛತಾ ಪರಿಕರ ಉಪಯೋಗಿಸಿಕೊಂಡು ಮಕ್ಕಳೇ ಸ್ವಚ್ಛಗೊಳಿಸುವುದರಲ್ಲಿ, ಶಾಲಾ ಆವರಣದ ಕಸ ಗುಡಿಸುವುದರಲ್ಲಿ ತಪ್ಪಿಲ್ಲ. ಇಂತಹ ಸಣ್ಣ ಪುಟ್ಟ ಕೆಲಸಗಳನ್ನು ಮಕ್ಕಳು ಚಿಕ್ಕಂದಿನಲ್ಲೇ ಕಲಿತರೆ ಒಳ್ಳೆಯದು. ಇದು ಕೂಡ ಶಿಕ್ಷಣದ ಒಂದು ಭಾಗ
ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಾಲಾ ಮುಖ್ಯಶಿಕ್ಷಕರ ವಿರುದ್ಧ ಸರ್ಕಾರ ಶಿಸ್ತುಕ್ರಮ ಕ್ರಮ ಕೈಗೊಂಡಿರುವ ಬಗ್ಗೆ ಮತ್ತು ಈ ವಿಚಾರದಲ್ಲಿ ಹೊಸ ನಿಯಮ ರೂಪಿಸಿದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸುವುದಕ್ಕೆ ಹಾಗೂ ಕಸ ಗುಡಿಸುವುದಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ಅಂತಹ ಕೆಲಸಗಳನ್ನು ಶಿಕ್ಷಕರು ಅಥವಾ ಶಾಲಾಭಿವೃದ್ಧಿ ಸಮಿತಿಯವರು ಮಾಡುವುದಿಲ್ಲ. ಆ ಕೆಲಸವನ್ನು ಮಕ್ಕಳು ಮಾಡುತ್ತಾರೆ. ಕೈಗವಸು ಹಾಕಿಕೊಂಡು, ಬ್ರಷ್‌ ಉಪಯೋಗಿಸಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪು ಅನಿಸುವುದಿಲ್ಲ ಚಿಕ್ಕವನಿದ್ದಾಗ ನಾನೂ ಶಾಲೆಯಲ್ಲಿ ಕಸ ಗುಡಿಸಿದ್ದೆ ಎಂದು ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button