ಬೆಳಗಾವಿಸುವರ್ಣ ಗಿರಿ ಟೈಮ್ಸ್
ಹಾರೂಗೇರಿ ಐತಿಹಾಸಿಕ & ಪುರಾತನ ಶಂಕರ ಬಾವಿಯಲ್ಲಿ ಅಪರಿಚಿತ ಶವ ಪತ್ತೆ !!

ರಾಯಬಾಗ: ತಾಲೂಕೀನ ಹಾರೂಗೇರಿ ಪಟ್ಟಣದಲ್ಲಿರುವ ಐತಿಹಾಸಿಕ, ಪುರಾತನ ಬಾವಿಯಾದ ಶಂಕರ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ನೀಲಿ ಬಣ್ಣದ ಜಾಕೆಟ್,ಕಪ್ಪು ಪ್ಯಾಂಟ್, ಬೂದಿ ಬಣ್ಣದ ಶರ್ಟ್,ನೀಲಿ ಬನಿಯನ್ ಹಾಕಿದ್ದು ದಪ್ಪ ದೇಹ, ಗೋದಿ ಬಣ್ಣದ ಚರ್ಮದ ಸುಮಾರು 40 ವಯಸ್ಸಿನ ಆಸುಪಾಸಿನ ವ್ಯಕ್ತಿಯಾಗಿದ್ದು,
ಸಂಬಂಧಪಟ್ಟವರು ಹಾರೂಗೇರಿ ಪೊಲೀಸ್ ಠಾಣೆಗೆ ಸಂರ್ಪಕಿಸಿ ಎಂದು ಪಿಎಸ್ಐ ಗಿರಮಲ್ಲಪ್ಪಾ ಉಪ್ಪಾರ್ ತಿಳಿಸಿದ್ದಾರೆ.
ಮೃತದೇಹವನ್ನ ಮರಣೋತ್ತರ ಪರಿಕ್ಷೇ ಮಾಡಲು ಹಾರೂಗೇರಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ
ಈ ಪ್ರಕರಣ ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.