ಚಾಮರಾಜನಗರಸುವರ್ಣ ಗಿರಿ ಟೈಮ್ಸ್

ಸಂವಿಧಾನ ದಿನದಂದು 26 ಕ್ಕೆ ಸಪ್ತಪದಿ ತುಳಿಯಲಿರುವ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ.!

ಚಾಮರಾಜನಗರ: ಮದುವೆ ಎಂದರೆ ಅಬ್ಬರ, ಆಡಂಬರ. ಇನ್ನು, ರಾಜಕಾರಣಿಗಳು, ಅಧಿಕಾರಿಗಳ ಮದುವೆ ಎಂದರೇ ಸ್ವರ್ಗವೇಧರೆಗೆ ಇಳಿದುಬಂದಂತೆ ಆದ್ದೂರಿತನ ಪ್ರದರ್ಶನ. ಆದರೆ, ಇದಕ್ಕೆಲ್ಲಾ ಹೊರತಾಗಿದ್ದಾರೆ ಈ ಮಹಿಳಾ ಅಧಿಕಾರಿ.

ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ(ಎಡಿಸಿ) ಆಗಿರುವ ಗೀತಾ ಹುಡೇದ ಅವರು ನ. 26ರಂದು ಮೈಸೂರಿನಲ್ಲಿ ಸಂವಿಧಾನ ದಿನವೇ ಮಂತ್ರ ಮಾಂಗಲ್ಯದ ಮೂಲಕ ನವ ಜೀವನಕ್ಕೆ ಕಾಲಿಡುತ್ತಿದ್ದು ಉನ್ನತ ಅಧಿಕಾರಿಯಾಗಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಎಂ.ಆರ್. ಹರೀಶ್ ಕುಮಾರ್ ಎಂಬವರೊಟ್ಟಿಗೆ ಮೈಸೂರಿನಲ್ಲಿ ಕುವೆಂಪು ಅವರ ಆಶಯದಂತೆ ಮಂತ್ರಮಾಂಗಲ್ಯದ ಮೂಲದ ನವಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ವಿವಾಹ ಆಮಂತ್ರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ಹಾಗೂ ಕುವೆಂಪು ಚಿತ್ರಗಳನ್ನು ಹಾಕಿಸಿ ವೈಚಾರಿಕತೆಯ ಮನೋಭಾವ ಮೆರೆದಿದ್ದಾರೆ.

ಗೀತಾ ಹುಡೇದ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿ, ನಂತರ ಕೆಎಎಸ್ ಅಧಿಕಾರಿಯಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಹಸೀಲ್ದಾ‌ರ್, ಕೊಳ್ಳೇಗಾಲ ಉಪವಿಭಾಗಧಿಕಾರಿ, ಮಲೆ ಮಹದೇಶ್ವರ ಬೆಟ್ಟದ ಕಾವ್ಯದರ್ಶಿ, ಗೃಹ ಮಂಡಳಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಇದೀಗ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರನಿರ್ವಹಿಸುತ್ತಿದ್ದಾರೆ.

ಮದುವೆ ಎಂಬುದು ಇತ್ತೀಚಿನ ದಿನಗಳಲ್ಲಿ ತೀರಾ ಅದ್ದೂರಿಯಾಗುತ್ತಿದ್ದು, ಇಂತಹ ಮದುವೆಯ ಮೂಲಕ ಕೆಲ ಪೋಷಕರು ಮನೆ-ಮಠ, ಅಸ್ತಿ ಕಳೆದುಕೊಳ್ಳುತ್ತಿದ್ದಾರೆ. ಮದುವೆಗಳು ಹೆಣ್ಣು ಹೆತ್ತವರಿಗೆ ಹೊರೆಯಾಗಬಾರದು. ನಾವು ಸರಳವಾಗಿ ಸಂವಿಧಾನದ ದಿನದಂದು ಕುವೆಂಪು ಅವರ ಮಂತ್ರಮಾಂಗಲ್ಯದ ಆಶಯದಂತೆ ವಿವಾಹವಾಗುತ್ತಿದ್ದೇವೆ ಎಂದು ಎಡಿಸಿ ಗೀತಾ ಹುಡೇದ ಹೆಳುತ್ತಾರೆ.

Related Articles

Leave a Reply

Your email address will not be published. Required fields are marked *

Back to top button